Home ಧಾರ್ಮಿಕ ಸುದ್ದಿ ಸುಬ್ರಹ್ಮಣ್ಯ ದೇವಸ್ಥಾನ: ರಥೋತ್ಸವ

ಸುಬ್ರಹ್ಮಣ್ಯ ದೇವಸ್ಥಾನ: ರಥೋತ್ಸವ

1963
0
SHARE

ಸುಬ್ರಹ್ಮಣ್ಯ : ಸುಬ್ರಹ್ಮಣ್ಯದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಷು ಹಬ್ಬವನ್ನು ರವಿವಾರ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಲಾಯಿತು. ವಿಷು ಹಬ್ಬದ ಅಂಗವಾಗಿ ಕುಕ್ಕೆ ದೇಗುಲ ದಲ್ಲಿ ಆರಂಭದಲ್ಲಿ ವಿಷು ಕಣಿಯನ್ನು ಶ್ರೀ ದೇವರಿಗೆ ದರ್ಶನ ಮಾಡಿಸಲಾಯಿತು. ಬಳಿಕ ವಿಷು ರಥೋತ್ಸವ ನಡೆಯಿತು. ಬೆಳಗ್ಗೆ ನಿತ್ಯ ಪೂಜೆ ಮತ್ತು ಸೇವಾದಿಗಳು ಉತ್ಸವದ ಬಳಿಕ ನಡೆದವು.

ಮುಂಜಾನೆ ದೇವಸ್ಥಾನದ ಗರ್ಭಗೃಹದ ಮುಂಭಾಗದಲ್ಲಿ ವಿಷು ಕಣಿಯನ್ನು ಇಡಲಾಯಿತು. ಬಳಿಕ ರಥಬೀದಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ವಿಷು ಹಬ್ಬದ ಅಂಗವಾಗಿ ಚಿಕ್ಕರಥೋತ್ಸವ ನೆರವೇರಿತು. ರಥೋತ್ಸವದ ಬಳಿಕ ದೇವಸ್ಥಾನದ ಹೊರಾಂಗಣದಲ್ಲಿರುವ ದ್ವಾದಶಿ ಮಂಟಪ ದಲ್ಲಿ ದೇವರಿಗೆ ಪೂಜೆ ನೆರವೇರಿತು. ತದನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ನಿತ್ಯಪೂಜೆ ಮತ್ತು ಬೆಳಗಿನ ಮಹಾಪೂಜೆ ನಡೆಯಿತು.

LEAVE A REPLY

Please enter your comment!
Please enter your name here