ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದೇವಸ್ಥಾನದ ನೂತನ ಬ್ರಹ್ಮರಥ ನಿರ್ಮಾಣ ಭರದಿಂದ ನಡೆಯುತ್ತಿದ್ದು, ಸೆಪ್ಟಂಬರ್ನಲ್ಲಿ ಸಮರ್ಪಣೆಯಾಗುವ ನಿರೀಕ್ಷೆಯಿದೆ.
ಚಂಪಾಷಷ್ಠಿ ಸಂದರ್ಭ ಎಳೆಯುವ 400 ವರ್ಷಗಳ ಇತಿಹಾಸವಿರುವ ಬ್ರಹ್ಮರಥ ಶಿಥಿಲವಾಗಿದ್ದು, ನೂತನ ರಥ ನಿರ್ಮಿಸುವುದು ಸೂಕ್ತ ಎಂಬುದಾಗಿ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಿತ್ತು.
ಬಿಡದಿ ರಿಯಾಲಿಟಿ ವೆಂಚರ್ ಪ್ರೋರ್ಗ್ರೂಪ್ ಸಂಸ್ಥೆಯ ಪಾಲುದಾರರಾದ ಉದ್ಯಮಿ ಮುತ್ತಪ್ಪ ರೈ ಹಾಗೂ ಅಜಿತ್ ರೈ 2 ಕೋಟಿ ರೂ. ವೆಚ್ಚದ ಬ್ರಹ್ಮರಥವನ್ನು ದಾನ ರೂಪದಲ್ಲಿ ನೀಡುತ್ತಿದ್ದಾರೆ.
ಈಗಿರುವ ಬ್ರಹ್ಮರಥವನ್ನು 400ವರ್ಷಗಳ ಹಿಂದೆ (ಕ್ರಿ.ಶ. 1582- 1629) ಕೆಳದಿ ಸಂಸ್ಥಾನದ ಹಿರಿಯ ವೆಂಕಟಪ್ಪ ನಾಯಕ ನಿರ್ಮಿಸಿ ಕೊಟ್ಟಿದ್ದನು ಎಂದು ದಾಖಲೆಯಿಂದ ತಿಳಿಯುತ್ತದೆ. 1923ರಲ್ಲಿ ಗಣಪತಿ ರಾವ್ ಐಗಳದ.ಕ. ಜಿಲ್ಲೆಯ ಪ್ರಾಚೀನ ಇತಿಹಾಸದಾಖಲೆಯಲ್ಲಿ ಈ ಕುರಿತು ಉಲ್ಲೇಖ ವಿದೆ. ಇದೇ ಅವಧಿಯಲ್ಲಿ ವೆಂಕಟಪ್ಪ ನಾಯಕ ಕೊಟೇಶ್ವರ ದೇಗುಲಕ್ಕೂ ರಥ ನೀಡಿರುವುದಾಗಿಯೂ ಗ್ರಂಥದಲ್ಲಿ ಉಲೇಖವಿದೆ.