Home ಧಾರ್ಮಿಕ ಸುದ್ದಿ ಕಲ್ಲುಬೆಟ್ಟು ಕ್ಷೇತ್ರ: ವಾರ್ಷಿಕ ಜಾತ್ರೆ ಸಂಪನ್ನ

ಕಲ್ಲುಬೆಟ್ಟು ಕ್ಷೇತ್ರ: ವಾರ್ಷಿಕ ಜಾತ್ರೆ ಸಂಪನ್ನ

1691
0
SHARE

ಪುಂಜಾಲಕಟ್ಟೆ : ಪಿಲಾತಬೆಟ್ಟು ಗ್ರಾಮದ ನಯನಾಡು ಕಲ್ಲುಬೆಟ್ಟು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯು ವೇ|ಮೂ| ಬಾಲಕೃಷ್ಣ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಗೋವಿಂದ ಭಟ್‌ ಸಹಕಾರದಲ್ಲಿ ಜರಗಿತು.

ಬೆಳಗ್ಗೆ ಪ್ರಾರ್ಥನೆ, ತೋರಣ ಮುಹೂರ್ತ, ಪುಣ್ಯಾಹವಾಚನ, ಕಲಶಾ ರಾಧನೆ, ಗಣಹೋಮ, ಪಂಚಾಮೃತಾಭಿಷೇಕ, ಕಲಶಾಷೇಕ, ಅಲಂಕಾರ ಪೂಜೆ, ಮಹಾಪೂಜೆ, 11ಕ್ಕೆ ಶ್ರೀ
ದೇವರ ದರ್ಶನಬಲಿ, ಬಟ್ಟಲು ಕಾಣಿಕೆ ಪ್ರಸಾದ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ 5ರಿಂದ ದೈವಗಳಿಗೆ ಪರ್ವಸೇವೆ, ಭಜನೆ, ರಂಗಪೂಜೆ, ಮಹಾಪೂಜೆ, ಶ್ರೀದೇವರ ಉತ್ಸವ ಬಲಿ, ಸೇವೆಗಳು, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್‌, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ ಕುಮಂಗಿಲ,
ಸದಸ್ಯರಾದ ರಾಜೇಂದ್ರ ಕೆ.ವಿ., ಮೋಹನ ಸಾಲ್ಯಾನ್‌, ರವೀಂದ್ರ ಶೆಟ್ಟಿ ಕಮ್ಮಾಜೆ, ರಮೇಶ್‌ ನಾಯ್ಕ, ನೋಣಯ ಮೂಲ್ಯ, ಲೀಲಾವತಿ, ಸುನೀತಾ ಹೆಗ್ಡೆ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here