ಮಹಾನಗರ, ಸೆ. 23: ನಗರದ ರಥಬೀದಿಯ ಶ್ರೀ ವೆಂಕಟ್ರಮಣ ದೇವ ಸ್ಥಾನದಲ್ಲಿ ಅನಂತ ಚತುರ್ದಶಿಯ ಪ್ರಯುಕ್ತ ಬೆಳಗ್ಗೆ 7.30ಕ್ಕೆ ಪ್ರಾರ್ಥನೆ, ಕಲಶ ಪ್ರತಿಷ್ಠೆ ಹಾಗೂ ಮಧ್ಯಾಹ್ನ ಪೂಜೆಯ ಬಳಿಕ ಪ್ರಸಾದ ರೂಪದಲ್ಲಿ ಸಮಾರಾಧನೆ ಜರಗಿತು.
ಗಂಗಾಭಿಷೇಕ, ಸಹಸ್ರನಾಮಾರ್ಚನೆ, ಮಧ್ಯಾಹ್ನ ಪೂಜೆ, ಹರಿವಾಣ ನೈವೇದ್ಯ, ರಾತ್ರಿ ಅಲಂಕಾರ ಪೂಜೆ ಮುಂತಾದ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ವಿಶೇಷ ಅಲಂಕಾರಗೊಂಡ ಶ್ರೀ ಅನಂತೇಶ ದೇವರ ಸನ್ನಿಧಿಗೆ ಭಕ್ತರು ಆಗಮಿಸಿದ್ದರು.