Home ಧಾರ್ಮಿಕ ಸುದ್ದಿ ಶ್ರೀ ನೀಲಕಂಠೇಶ್ವರ: ಕೊಡಿಮರ ಅರ್ಪಣೆ

ಶ್ರೀ ನೀಲಕಂಠೇಶ್ವರ: ಕೊಡಿಮರ ಅರ್ಪಣೆ

1446
0
SHARE

ಪುಂಜಾಲಕಟ್ಟೆ : ಬಂಟ್ವಾಳ ತಾ| ವಾಮದಪದವು ಸಮೀಪದ ನೀಲಿ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ
ಸ್ಥಾಪಿಸಲಾಗುವ ನೂತನ ಗರುಡ ಕಂಬ(ಕೊಡಿಮರ)ವನ್ನು ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ಸಾಗಿಸಲಾಯಿತು.

ಇಲ್ಲಿಗೆ ಸಮೀಪದ ಕುಂಞಂದೊಟ್ಟು ದಿ| ತಿಮ್ಮಪ್ಪ ರೈ ಅವರ ಮನೆಯವರ ವತಿಯಿಂದ ಕೊಡಿಮರವನ್ನು ನೀಡಲಾಗಿದ್ದು, ಸೋಮವಾರ ಬೆಳಗ್ಗೆ ವೇ| ಮೂ| ಬಾಲಕೃಷ್ಣ ಪಾಂಗಣ್ಣಾಯ ಅವರ ಪೌರೋಹಿತ್ಯದಲ್ಲಿ ವೃಕ್ಷ ಮುಹೂರ್ತ ನಡೆಸಿ ಕೊಡಿಮರವನ್ನು ಸಿದ್ಧಪಡಿಸಲಾಯಿತು. ಬಳಿಕ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಸಾಗಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ಚೌಟ, ಪ್ರಮುಖರಾದ ನಾಗರಾಜ ಶೆಟ್ಟಿ, ಪ್ರಕಾಶ್‌ ಪೂಜಾರಿ ಕಲ್ಲಕೊಡಂಗೆ, ಪುರುಷೋತ್ತಮ ಶೆಟ್ಟಿ ವಾಮದಪದವು, ಪ್ರಭಾಕರ ಶೆಟ್ಟಿ ಬೆಂಗಳೂರು, ಸದಾಶಿವ ಪೂಜಾರಿ, ರೂಪೇಶ್‌ ಪೂಜಾರಿ, ಯಶಸ್‌ ರೈ ಕುಂಞಂದೊಟ್ಟು, ಶಂಕರ ಭಂಡಾರಿ, ಚಂದ್ರಶೇಖರ ಶೆಟ್ಟಿ, ಸುಧೀರ್‌ ಶೆಟ್ಟಿ ಕುಂಡೋಳಿ, ಭವಾನಿ ಶಂಕರ ರಾವ್‌, ವಿಜಯ ರೈ ಆಲದಪದವು, ಪ್ರಕಾಶ್‌ ಶೆಟ್ಟಿ ಕಕ್ಕಿಬೆಟ್ಟು, ಮೋಹನದಾಸ ಗಟ್ಟಿ, ಸೀತಾರಾಮ ಶೆಟ್ಟಿ, ಸುಂದರ ಕಂಬಳಿ ಮತ್ತಿತರರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here