Home ಧಾರ್ಮಿಕ ಸುದ್ದಿ ಶ್ರೀ ನವದುರ್ಗಾ ಮಹಾಗಣಪತಿ ದೇವಸ್ಥಾನ: ಏಕಾಹ ಭಜನೆ

ಶ್ರೀ ನವದುರ್ಗಾ ಮಹಾಗಣಪತಿ ದೇವಸ್ಥಾನ: ಏಕಾಹ ಭಜನೆ

387
0
SHARE

ಮಹಾನಗರ: ನಗರದ ಮಣ್ಣಗುಡ್ಡೆಯ ಶ್ರೀ ನವದುರ್ಗಾ ಮಹಾಗಣಪತಿ ದೇವಸ್ಥಾನದಲ್ಲಿ 12ನೇ ವರ್ಷದ ಅಹೋರಾತ್ರಿ ಏಕಾಹ ಭಜನೆ ಇತ್ತೀಚೆಗೆ ಜರಗಿತು.
ಸಿಎ ಎಸ್‌.ಎಸ್‌. ನಾಯಕ್‌, ಉದ್ಯಮಿ ಕೇಶವ ಮಲ್ಯ, ಸತ್ಯನಾರಾಯಣ ಕಾಮತ್‌, ಸುರೇಶ ಶೆಣೈ, ಎಂ. ರಘು ರಾಮ ಕಾಮತ್‌, ಎಂ. ಮೋಹನ ಶೆಣೈ ಗೌರಿಶಂಕರ್‌ ಉದ್ಘಾಟಿಸಿದರು.

ಎಂ. ರಘುರಾಮ ಕಾಮತ್‌ ಏಕಾಹ ಭಜನೆಯನ್ನು ಪ್ರಾರಂಭಿಸಿದರು. ಭಜನೆಯಲ್ಲಿ ಎಂ. ಮೋಹನ ಶೆಣೈ ಹಾಗೂ ಗೌರಿ ಶಂಕರ್‌ ಪಾಲ್ಗೊಡಿದ್ದರು. ಜಿ. ಗಣೇಶ ಭಟ್‌, ಜಿ. ಅಶ್ವಿ‌ನ್‌ ಭಟ್‌, ವಸಂತ್‌ ಶೆಟ್‌, ದೀಪಾ ಪ್ರಭು, ಭಾರತಿ ಜಿ. ಭಟ್‌, ಗಾಯತ್ರಿ ವಿ. ಭಟ್‌ ಜ್ಯೋತಿ ಎಸ್‌. ಭಟ್‌ ಸಹಕರಿಸಿದರು.

ಜಿ. ಸತೀಶ್‌ ಭಟ್‌, ಜಿ. ಕಾರ್ತಿಕ್‌ ಭಟ್‌ ದೀಪ ಬೆಳಗಿಸಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ದೀಪಕ್‌ ಭಟ್‌ ರಂಗೋಲಿ ಹಾಕಿ ಸಹಕರಿಸಿದರು.
ಡೆಪ್ಯುಟಿ ಕಮಿಷ‌ನರ್‌ ಗೋಕುಲದಾಸ ನಾಯಕ್‌, ಆಡಳಿತ ಮೊಕ್ತೇಸರ ಜಿ. ವಿಶ್ವನಾಥ ಭಟ್‌ ಮೊದಲಾದವರು ಉಪಸ್ಥಿತರಿದ್ದರು. ಮರುದಿನ ಮಂಗಲ ಪೂಜೆ ಜರಗಿ ಬಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

LEAVE A REPLY

Please enter your comment!
Please enter your name here