ಮಹಾನಗರ : ನಗರದ ರಥಬೀದಿ ಕುಡ್ತೇರಿ ಶ್ರೀಮಹಾಮ್ಮಾಯ ದೇವಸ್ಥಾನದಲ್ಲಿ ಮೇ 16ರಿಂದ ಮೊದಲ್ಗೊಂಡು ಜೂ. 12ರ ವರೆಗೆ ಜ್ಯೇಷ್ಠ ಮಾಸದ ಪ್ರಯುಕ್ತ 28 ದಿನಗಳ ಪರ್ಯಂತ ಸಂಜೆ ಮುಂಬಯಿಯ ಪ್ರವಚನ ಸಮರ್ಥೆ ಬಿರುದಾಂಕಿತೆ ಭಾವನಾ ಭಾಸ್ಕರ ಪ್ರಭು ಇವರಿಂದ ಅಧಿಕ ಮಾಸದ ಮಹಾತ್ಮೆ ಮತ್ತು ಶ್ರೀಮತ್ ಭಾಗವತ ಕಥಾಮೃತ ಪ್ರವಚನವು ಕೊಂಕಣಿ ಭಾಷೆಯಲ್ಲಿ ಆರಂಭಗೊಂಡಿದ್ದು, ಇದರ ಉದ್ಘಾಟನೆ ಸಮಾರಂಭವು ಬುಧವಾರ ಜರಗಿತು.
ಡಾ| ಅರವಿಂದ ಶಾನ್ಭಾಗ್ ಮುಖ್ಯ ಅತಿಥಿಗಳಾಗಿದ್ದರು. ಕುಡ್ತೇರಿ ಶ್ರೀ ಮಹಾಮ್ಮಾಯ ದೇವಸ್ಥಾನದ ಆಡಳಿತ ಮೊಕ್ತೇಸರ ಟಿ. ಗೋವಿಂದ ಪೈ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಸಂಘಟಕ ಕೆ. ಶ್ರೀನಿವಾಸ ಕಾಮತ್, ವೇ| ಮೂ| ಎಂ. ವಿಟ್ಠಲ ಭಟ್, ಮೊಕ್ತೇಸರ ಪ್ರಕಾಶ್ ಕಾಮತ್ ಹಾಗೂ ಪ್ರವಚನಕರ್ತೆ ಭಾವನ ಭಾಸ್ಕರ ಪ್ರಭು ಉಪಸ್ಥಿತರಿದ್ದರು.