ನಗರ : ಇಲ್ಲಿನ ರೈಲ್ವೇ ನಿಲ್ದಾಣ ಬಳಿಯ ಶ್ರೀ ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಮೀ ಕ್ಷೇತ್ರದ ಜೀರ್ಣೋದ್ಧಾರ ಅಂಗವಾಗಿ ಮಾ. 23ರಂದು ಕೃಷ್ಣಶಿಲೆಯ ಆಗಮನ, ಭವ್ಯ ಮೆರವಣಿಗೆ, ಗರ್ಭ ಗುಡಿಯ ಶಿಲಾಪೂಜನ ಕಾರ್ಯಕ್ರಮ ನಡೆಯಲಿವೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ನೆಲ್ಲಿಕಟ್ಟೆ ಹೇಳಿದರು. ಜೀಣೋದ್ಧಾರದ ಅಂಗವಾಗಿ ಕ್ಷೇತ್ರದಲ್ಲಿ ನಡೆದ ಭಕ್ತರ ಸಭೆಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಮಾಹಿತಿ ನೀಡಿದರು.
ಕೃಷ್ಣಶಿಲಾ ಕಲ್ಲು ಮಾ. 22ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಲಿದೆ. ಮಾ. 23ರಂದು ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಳಿಕ ಶಿಲಾ ಕಲ್ಲನ್ನು ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ತರಲಾಗುವುದು. ಕ್ಷೇತ್ರದ ತಂತ್ರಿ ಕುಂಟಾರು ರವೀಶ ತಂತ್ರಿ ಅವರಿಗೆ ಆಚಾರ್ಯವರಣ ನಡೆದು ಗರ್ಭ ಗುಡಿಯ ಶಿಲಾ ಪೂಜನ ನಡೆಯಲಿದೆ ಎಂದರು.
ಕಾರ್ಯಾಧ್ಯಕ್ಷ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳ ಅಂಗವಾಗಿ ಶಿಲಾ ಕಲ್ಲಿನ ಆಗಮನ ವಿಜೃಂಭಣೆಯಿಂದ ನಡೆಯಲಿದೆ. ದೇವಸ್ಥಾನದಲ್ಲಿ ಪೂಜೆ ನಡೆದು ಹೊರಡುವ ಶಿಲಾ ಕಲ್ಲಿನ ಮೆರವಣಿಗೆ ಮುಖ್ಯರಸ್ತೆ, ಬಸ್ ನಿಲ್ದಾಣ ಮುಂಭಾಗದ ಮೂಲಕ ಅರುಣಾ ಚಿತ್ರ ಮಂದಿರದ ಬಳಿಯಿಂದ ಸಾಗಿ ಎಪಿಎಂಸಿ ರಸ್ತೆಯ ಮೂಲಕ ರೈಲ್ವೇ ಗೇಟ್ ಹಾದು ಕ್ಷೇತ್ರಕ್ಕೆ ಆಗಮಿಸಲಿದೆ. ಕ್ಷೇತ್ರದ ತಂತ್ರಿ ರವೀಶ್ ತಂತ್ರಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು ಎಂದರು.
ಶಿಲಾ ಪೂಜೆ ಹಾಗೂ ಕೃಷ್ಣ ಶಿಲೆ ಆಗಮನದ ಮೆರವಣಿಗೆಯನ್ನು ಯಶಸ್ವಿಗೊಳಿಸಲು ಹಲವು ಪ್ರಮುಖರಿಗೆ ಜವಾಬ್ದಾರಿ ನೀಡಲಾಯಿತು. ಮಾ. 23ರಂದು ಕ್ಷೇತ್ರದಲ್ಲಿ ನಡೆಯಲಿರುವ ಶಿಲಾ ಪೂಜೆ ಹಾಗೂ ಕೃಷ್ಣ ಶಿಲೆಯ ಆಗಮನ ಕಾರ್ಯ ಕ್ರಮಗಳ ಆಮಂತ್ರಣ ಪತ್ರವನ್ನು ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸಪಲ್ಯ ಬಿಡುಗಡೆ ಮಾಡಿದರು.
ಧರ್ಮದರ್ಶಿ ಐತ್ತಪ್ಪ ಸಪಲ್ಯ, ಉಪಾಧ್ಯಕ್ಷರಾದ ನಯನಾ ವಿ. ರೈ, ಲೋಕೇಶ್ ಹೆಗ್ಡೆ, ಜತೆ ಕಾರ್ಯ ದರ್ಶಿಗಳಾದ ಪ್ರಭಾ ಆಚಾರ್ಯ, ಇಂದುಶೇಖರ್, ಕೋಶಾಧಿ ಕಾರಿ ಸಂಜೀವ ನಾಯ್ಕ ಉಪಸ್ಥಿತರಿದ್ದರು. ಕ್ಷೇತ್ರದ ಜನಾರ್ದನ ಬೆಟ್ಟ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ವಂದಿಸಿದರು.
ಆರ್ಥಿಕ ಸಮಿತಿ
ವನಿತಾ ತನಿಯಪ್ಪ, ಪ್ರಕಾಶ್ ಕಲ್ಲೇಗ, ನಾರಾಯಣ ಕಬಕ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ| ಕೃಷ್ಣ ಪ್ರಸನ್ನ, ರಘುನಾಥ ಚಿಕ್ಕಪುತ್ತೂರು, ದೇವಾನಂದ ಎಸ್. ಮುಕ್ರಂಪಾಡಿ, ನಟರಾಜ್, ನಿವೃತ್ತ ಉಪನಿರೀಕ್ಷಕ ಐತ್ತಪ್ಪ ಚಿಕ್ಕಪುತ್ತೂರು, ಬನ್ನೂರು ಸ್ಫೂ ರ್ತಿ ಯುವ ಸಂಸ್ಥೆಗಳ ಸಂಚಾಲಕ ದಿನೇಶ ಸಾಲಿಯಾನ್ ಬನ್ನೂರು, ಜನಾರ್ದನ ಗೌಡ ಬನ್ನೂರು, ಅಣ್ಣಪ್ಪ ಸಪಲ್ಯ ಕೆಮನಾಜೆ, ಶ್ರೀನಿವಾಸ ಸಪಲ್ಯ ತೆಂಕಿಲ, ರಮೇಶ ಗೌಡ, ಅನಿಲ್ ಉರ್ಲಾಂಡಿ, ನವೀನ್ ಕೊಲ, ವೆಂಕಟಕೃಷ್ಣ ಭಟ್, ಮೋಹನ ಕುಂಜಾರು, ಆಶಾ ರಾವ್, ಗಂಗಾಧರ ಮೆಲ್ಕಾರ್, ನಾರಾಯಣ ಸಪಲ್ಯ, ಕೆ. ಮೋಹನ ನಗರ, ರಾಜೀವ ಸುವರ್ಣ ಬನ್ನೂರು, ಬಾಲಕೃಷ್ಣ ಪೆರಯಡ್ಕ ಮೊದಲಾದವರನ್ನು ಆರ್ಥಿಕ ಸಮಿತಿಗೆ ಆಯ್ಕೆ ಮಾಡಲಾಯಿತು.