Home ಧಾರ್ಮಿಕ ಸುದ್ದಿ ಶ್ರೀಕ್ಷೇತ್ರ ನಿಟಿಲಾಪುರ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ

ಶ್ರೀಕ್ಷೇತ್ರ ನಿಟಿಲಾಪುರ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ

888
0
SHARE

ಬಂಟ್ವಾಳ : ಶ್ರೀಕ್ಷೇತ್ರ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳವಾರ ಹಸಿರುವಾಣಿ ಮೆರವಣಿಗೆ ಸಂಪನ್ನಗೊಂಡಿತು.

ನೂರಾರು ಸಂಖ್ಯೆಯ ವಾಹನಗಳಲ್ಲಿ ಅಪಾರ ಸಂಖ್ಯೆಯಲ್ಲಿ ಅಕ್ಕಿ, ತೆಂಗಿನಕಾಯಿ, ಸೀಯಾಳ, ವಿವಿಧ ತರಕಾರಿ ಸುವಸ್ತುಗಳು ಮೆರವಣಿಗೆಯಲ್ಲಿ ಸಾಗಿಬಂತು. ಕೆ.ಸಿ. ರೋಡಿನಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ರಾವ್‌ ಕಾರಂತ ಅವರು ಆರತಿ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ರಮೇಶ್‌ ಕಲ್ಲಡ್ಕರ ಶಿಲ್ಪಾ ಗೊಂಬೆ ಬಳಗ, ಮೋಹನದಾಸ ಕೊಟ್ಟಾರಿ ಮುನ್ನೂರು ಬಳಗದ ಚೆಂಡೆ ವಾದನ, ಹೊನ್ನಾವರದ ಬ್ಯಾಂಡ್‌ ಸೆಟ್‌ ಸಹಿತ ವಿವಿಧ ಸಾಂಸ್ಕೃತಿಕ ವೈವಿಧ್ಯಗಳ ಜತೆ ಮೆರವಣಿಗೆ ಅಪಾರ ಭಕ್ತ ಜನರಿಂದ ಆಕರ್ಷಿತವಾಗಿತ್ತು. ಮೆರವಣಿಗೆಯಲ್ಲಿ ದೇವರ ಬೆಳ್ಳಿ ಪಲ್ಲಕಿ, ಬೆಳ್ಳಿ ಪ್ರಭಾವಳಿ, ಬೆಳ್ಳಿ ಬಾಗಿಲು, ಸ್ವರ್ಣ ಮುಗುಳಿ, ದೇವರ ಬೆಳ್ಳಿಯ ಮುಖ ಕವಚ, ಕೊಡಿಮರದ ನಂದಿ, ಪಾಣಿಪೀಠ ಬೆಳ್ಳಿ ಕವಚ, 108 ಬೆಳ್ಳಿಯ ಕಲಶಗಳ ಸಹಿತ ಸುಮಂಗಲಿಯರು, ಪುರುಷರು ಮೆರವಣಿಗೆಯಲ್ಲಿ ಸಾಗಿಬಂದರು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ಬರಿಮಾರು, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸಂತೋಷ್‌ ಕುಮಾರ್‌ ಶೆಟ್ಟಿ ಅರೆಬೆಟ್ಟು, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಸಹಿತ ವಿವಿಧ ಸಮಿತಿ ಪದಾಧಿಕಾರಿಗಳಾದ ಗೋಳ್ತಮಜಲು ಗಣೇಶ ಶೆಟ್ಟಿ, ಕೆ. ಪದ್ಮನಾಭ ರೈ, ದೇವದಾಸ ಪೂಜಾರಿ, ರಾಮಚಂದ್ರ ಬನ್ನಿಂತಾಯ, ಗಣೇಶ ನಾಯ್ಕ ಚನಿಲ, ಬಾಲಪ್ಪ ಗೌಡ, ಚೇತನಾ, ಪಿ. ಬಟ್ಯಪ್ಪ ಶೆಟ್ಟಿ, ಡಾ| ವಸಂತ ಎನ್‌. ಹೇಮಲತಾ ಗಟ್ಟಿ ಸಹಿತ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಇಂದಿನ ಕಾರ್ಯಕ್ರಮ
ಮಾ. 22ರಂದು ಬೆಳಗ್ಗೆ 8ರಿಂದ ಗಣಪತಿ ಹೋಮ, ಬಿಂಬ ಶುದ್ಧಿ, ಪ್ರಾಯಶ್ಚಿತ್ತ ಹೋಮ, ಶಾಂತಿಹೋಮ, ಪ್ರೋಕ್ತ ಹೋಮ, ಅನುಜ್ಞಾ ಪ್ರಾರ್ಥನೆ, ಖನನಾದಿ ಸಪ್ತಶುದ್ಧಿ ನಡೆಯಲಿದೆ. ಸಂಜೆ 6ರಿಂದ ಅಧಿವಾಸ ಹೋಮ, ಕಲಶ ಪೂಜೆ, ಕುಂಭೇಶ ಕರ್ಕರಿ, ಕಲಶ ಪೂಜೆ, ಕಲಶಾಧಿವಾಸ, ಧ್ಯಾನಾಧಿವಾಸ ನಡೆಯುವುದು.

6.30ಕ್ಕೆ ಕಲ್ಲಡ್ಕ ವಿಟuಲ ನಾಯಕ್‌ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ರಾತ್ರಿ 8.30ರಿಂದ ಶ್ರೀ ರಾಮ ಭಜನ ಮಂದಿರ, ಶ್ರೀ ರಾಮನಗರ ಕೋಟೆಕಣಿ ಇದರ ಸಂಗೀತ ವಿದ್ಯಾರ್ಥಿಗಳಿಂದ ಸಂಗೀತ ಸೌರಭ, ರಾತ್ರಿ 10ರಿಂದ ಶ್ರೀ ನಂದೇಶ್‌ ಮತ್ತು ಬಳಗ, ಮಯ್ಯಲ ಇವರಿಂದ ಜಾನಪದ ನೃತ್ಯ, ರಾತ್ರಿ 10.30ರಿಂದ ನೃತ್ಯ ಕಲಾ ತಂಡ ಮಾಣಿ ಸ್ವರ್ಣಜ್ಯೋತ್ಸಾ$°ಮತ್ತು ಬಳಗದವರಿಂದ ಭಕ್ತಿ ನೃತ್ಯ ವೈಭವ ನಡೆಯಲಿದೆ.

LEAVE A REPLY

Please enter your comment!
Please enter your name here