Home ಧಾರ್ಮಿಕ ಸುದ್ದಿ ಶ್ರೀ ಬ್ರಹ್ಮ ಮುಗೇರ ದೈವಸ್ಥಾನ: ಧಾರ್ಮಿಕ ಸಭೆ

ಶ್ರೀ ಬ್ರಹ್ಮ ಮುಗೇರ ದೈವಸ್ಥಾನ: ಧಾರ್ಮಿಕ ಸಭೆ

854
0
SHARE

ಕಾಟಿಪಳ್ಳ: ಶ್ರೀ ಬ್ರಹ್ಮ ಮುಗೇರ ಮಹಂಕಾಳಿ ದೈವಸ್ಥಾನ ಗಣೇಶಪುರ – ಕಾಟಿಪಳ್ಳ ಇಲ್ಲಿನ ಪುನಃ ಪ್ರತಿಷ್ಠೆ-ಕಲಶಾಭಿಷೇಕ ಪ್ರಯುಕ್ತ ಧಾರ್ಮಿಕ ಸಭೆ ಜರಗಿತು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಐ. ರಮಾನಂದ ಭಟ್ ಸಭೆ ಉದ್ಘಾಟಿಸಿ ಶುಭ ಕೋರಿದರು. ಕೇಂಜ ಶ್ರೀಧರ ತಂತ್ರಿ ಶುಭಶಂಸನೆಗೈದರು. ಸಭಾಧ್ಯಕ್ಷತೆಯನ್ನು ಸುಂದರ ಮೇರ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಡಾ| ಆಶಾಜ್ಯೋತಿ ರೈ, ಸಾಧು ಪೂಜಾರಿ, ಪರೇಲ್‌, ಶ್ರೀನಿವಾಸ ರಾವ್‌, ಗಂಗಾಧರ ಕರ್ಕೇರ ಹೊಸಬೆಟ್ಟು, ಶಶಿಕಲಾ, ಧರ್ಮೇಂದ್ರ ಗಣೇಶಪುರ, ಪದ್ಮನಾಭ ರಾವ್‌, ಮನಪಾ ಸದಸ್ಯ ಬಶೀರ್‌ ಅಹಮದ್‌, ಹೊನ್ನಯ್ಯ ಸನಿಲ್‌, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಆಚಾರ್‌, ಗುರಿಕಾರರಾದ ಶಾಂತ ಗುರಿಕಾರ, ದಯಾನಂದ ಗುರಿಕಾರ, ಕೃಷ್ಣಪ್ಪ ಗುರಿಕಾರ, ಶಂಕರ ಗುರಿಕಾರ, ಯೋಗೀಶ್‌ ಗುರಿಕಾರ ಮತ್ತು ವಾದಿರಾಜ ರಾವ್‌, ಕರುಣಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here