Home ಧಾರ್ಮಿಕ ಸುದ್ದಿ ಶ್ರೀ ಭಗವತಿ ದೊಡ್ಡಮುಡಿ ಸಂಪನ್ನ

ಶ್ರೀ ಭಗವತಿ ದೊಡ್ಡಮುಡಿ ಸಂಪನ್ನ

1556
0
SHARE

ಸುಳ್ಯ : ಐತಿಹಾಸಿಕ ಹಿನ್ನೆಲೆಯುಳ್ಳ ಪೆರಾಜೆ ಶ್ರೀ ಭಗವತಿ ದೊಡ್ಡಮುಡಿ ರವಿವಾರ ಕೊಡಗು ಸಂಪಾಜೆಯ ಪೆರಾಜೆ ಗ್ರಾಮದ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನಡೆಯಿತು. ಪ್ರತಿ ವರ್ಷದಂತೆ ಕೇರಳ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಧಾರ್ಮಿಕ ಹಿನ್ನೆಲೆಯಲ್ಲಿ ದೇವಿಯ ಸ್ವರೂಪದಲ್ಲಿ ಕಾಣುವ ಪೆರಾಜೆ ದೊಡ್ಡಮುಡಿ ಅತ್ಯಂತ ಮಹತ್ವ ಪಡೆದಿದೆ.
ಭಗವತಿ ದೇವಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಇತರ ಕಾರ್ಯಗಳಿಗೆ ಹರಿಕೆ ಹೊತ್ತ ಭಕ್ತರು ಸೀರೆ, ಚಿನ್ನ, ಬೆಳ್ಳಿಗಳನ್ನು ಹರಕೆ ರೂಪದಲ್ಲಿ ಅರ್ಪಿಸಿದರು. ದೇವಾಲಯದ ಪ್ರಧಾನ ಅರ್ಚಕ ವೆಂಕಟರಮಣ, ಆಡಳಿತ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ, ರಾಜಗೋಪಾಲ ರಾಮಕಜೆ, ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here