Home ಧಾರ್ಮಿಕ ಸುದ್ದಿ ಕಾಯಕಲ್ಪಗೊಳ್ಳಲಿದೆ ಕೂಡಾಲು ಶ್ರೀ ಯಕ್ಷೆ ದೇಗುಲ

ಕಾಯಕಲ್ಪಗೊಳ್ಳಲಿದೆ ಕೂಡಾಲು ಶ್ರೀ ಯಕ್ಷೆ ದೇಗುಲ

955
0
SHARE

ಕುಂದಾಪುರ: ತಾಲೂಕಿನ ಯಡಾಡಿ- ಮತ್ಯಾಡಿ ಗ್ರಾಮದ ಕೂಡಾಲು ಶ್ರೀ ಯಕ್ಷೆ ದೇವಸ್ಥಾನ ಕಾಯಕಲ್ಪಗೊಳ್ಳಲಿದ್ದು ಸುಮಾರು 1 ಕೋ.ರೂ. ವೆಚ್ಚದಲ್ಲಿ ಶಿಲಾಮಯವಾಗಿ ನವೀಕರಣಗೊಳ್ಳಲಿದೆ.

ಗಾವಳಿ ಸಮೀಪದ ಕೂಡಾಲಿನಲ್ಲಿರುವ ಈ ದೇವಸ್ಥಾನಕ್ಕೆ ಸಾಕಷ್ಟು ವರ್ಷಗಳ ಭವ್ಯ ಇತಿಹಾಸವಿದೆ. ಊರಿನ ಶಕ್ತಿಕೇಂದ್ರವಾಗಿ, ಪರಂಪರಾಗತ ನಂಬಿಕೆಯ ಉನ್ನತ ಧಾರ್ಮಿಕ ಕೇಂದ್ರ, ಭಕ್ತರ ಆರಾಧನಾ ಸ್ಥಳವಾಗಿರುವ ಶ್ರೀಕ್ಷೇತ್ರ ಇತ್ತೀಚೆಗಿನ ವರ್ಷಗಳಲ್ಲಿ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಶಿಲಾಮಯಗೊಳ್ಳಲಿದ್ದು ಆ ನೆಲೆಯಲ್ಲಿ ಜೀರ್ಣೋದ್ಧಾರ ಸಮಿತಿ ರಚನೆ ಮಾಡಲಾಯಿತು.

ಸುಮಾರು 50 ವರ್ಷಗಳ ಹಿಂದೆ ಧರ್ಮ ದೇವತೆಗಳಾದ ಯಕ್ಷೆ, ವನದುರ್ಗಾ, ಭದ್ರಕಾಳಿ, ವೀರಭದ್ರ ಹಾಗೂ ಗಣಗಳಾದ ಪಂಜುರ್ಲಿ, ಕಲ್ಲುಕುಟಿಗ, ಬೊಬ್ಬರ್ಯ, ಹೈಗುಳಿ ದೈವಗಳು ಬಂದು ಇಲ್ಲಿ ನೆಲೆಸಿದ್ದು, ಈ ದೇವರು ನೆಲೆ ನಿಲ್ಲಲು ಕೂಡಾಲು ಮನೆತನದವರು ವಾಸವಿರುವ ಮನೆ ಹಾಗೂ ಮನೆಯ ಪರಿಸರವೇ ಸೂಕ್ತವೆಂದು ಸೂಚಿಸಿದ್ದು, ಇದಕ್ಕೆ ಕೂಡಾಲು ಮನೆತನದವರು ಒಪ್ಪಿ ಈ ಸ್ಥಳದಲ್ಲಿರುವ ಮನೆ ತೆರವುಗೊಳಿಸಿ ಅದೇ ಸ್ಥಳದಲ್ಲಿ ಎಲ್ಲ ದೇವರಿಗೆ ದೇವಾಗಾರ ನಿರ್ಮಿಸಿ ನಿತ್ಯ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.

ಜೀರ್ಣೋದ್ಧಾರಕ್ಕೆ ಭಕ್ತರು ದೇಣಿಗೆ ರೂಪದಲ್ಲಿ ಒಂದು ಗುಡಿಯ ಸಂಪೂರ್ಣ ವೆಚ್ಚ ಭರಿಸಲು ಅವಕಾಶವಿದೆ. ಯಕ್ಷೆ ದೇವತೆಯ ವಿಗ್ರಹಕ್ಕೆ ಬೆಳ್ಳಿಯ ಪ್ರಭಾವಳಿ ಅಗತ್ಯವಿದ್ದು ಇದನ್ನು ಭಕ್ತರು ಸೇವಾರೂಪದಲ್ಲಿ ಮಾಡಿಸಲು ಅವಕಾಶವಿದೆ.

ಜೀರ್ಣೋದ್ಧಾರ ಪ್ರಕ್ರಿಯೆಗಳು ಭರದಿಂದ ಸಾಗುತ್ತಿದ್ದು ಫೆ. 4ರಂದು ಪುನರ್‌ ಪ್ರತಿಷ್ಠೆ ನಿಗದಿಪಡಿಸಲಾಗಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.

ಓಂ ಶ್ರೀ ಸಾಯಿ ಜ್ಯೋತಿಷ್ಯಾಲಯ
South Canara’s Famous Asrologer
Family issue, ಮದುವೆಯಲ್ಲಿ ವಿಘ್ನ, ಸತಿ-ಪತಿ ಕಲಹ, Court Case, ವಶೀಕರಣ, Love problems, ಸದಾ ಕುಟುಂಬದಲ್ಲಿ ಕಲಹ, Money problem, ಕೆಲಸದಲ್ಲಿ ಕಿರಿಕಿರಿ, ಮಕ್ಕಳ ಸಮಸ್ಯೆ, ವ್ಯಾಪಾರದಲ್ಲಿ ಅಡೆ-ತಡೆ, Loan Issue, ನಿಮ್ಮ ಯಾವುದೇ ಸಮಸ್ಯೆಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ.
ಹೊಟೇಲ್ ದುರ್ಗಾ ಇಂಟರ್ ನ್ಯಾಶನಲ್, ರೂಂ. ನಂ. 310, 3ನೇ ಮಹಡಿ, ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ, ಉಡುಪಿ.
ಪಂಡಿತ್ ಸಾಯಿನಾಥ್ ಜೋಶಿ : Ph- 98449-44242

LEAVE A REPLY

Please enter your comment!
Please enter your name here