ಉಡುಪಿ: ಮಲಗಿ ಪರಮಾದರದಿ ಪಾಡಲು| ಕುಳಿತು ಕೇಳುವಾ|| ಕುಳಿತು ಪಾಡಲು ನಿಲುವ| ನಿಂತರೆ ನಲಿವ| ನಲಿದರೆ ಒಲಿವೆ ನಾನಿಮಗೆಂಬ||…
ರವಿವಾರ ಶ್ರೀವಾದಿರಾಜ ಸ್ವಾಮಿಗಳ, ಶ್ರೀವ್ಯಾಸರಾಜರ ಆರಾಧನೋತ್ಸವದ ಅಂಗವಾಗಿ ಶ್ರೀಕೃಷ್ಣ ಮಠದಲ್ಲಿ ನಡೆದ ‘ನ್ಯಾಯಾಮೃತದ ಅವಿದ್ಯಾಲಕ್ಷಣ ಭಂಗ’ ಕುರಿತ ವಾಕ್ಯಾರ್ಥ ಗೋಷ್ಠಿಯಲ್ಲಿ ಪರ್ಯಾಯ ಶ್ರೀ ಪಲಿಮಾರು ಸ್ವಾಮೀಜಿ, ಶ್ರೀ ಪೇಜಾವರ ಸ್ವಾಮೀಜಿ, ಶ್ರೀ ಅದಮಾರು ಕಿರಿಯ ಸ್ವಾಮೀಜಿ ಪಾಲ್ಗೊಂಡಿದ್ದರು. ವಿದ್ವಾಂಸರು ಚರ್ಚೆಯಲ್ಲಿ ಮಂಡಿಸುತ್ತಿರುವ ವಿಚಾರಗಳನ್ನು ಪೇಜಾವರ ಸ್ವಾಮೀಜಿಯವರು ಆಲಿಸಿ ಉತ್ತರಿಸುತ್ತಿದ್ದರು.
ಬೆಳಗ್ಗೆ ಚೈತನ್ಯ ಸಂಭ್ರಮೋತ್ಸವದಲ್ಲಿ ವೈದ್ಯರು ಹೆಚ್ಚು ಹೊತ್ತು ಕುಳಿತುಕೊಳ್ಳಬಾರದು. ಮಲಗಿಕೊಂಡು ಹೆಚ್ಚಿಗೆ ಇರಬೇಕೆಂದು ಹೇಳಿದ್ದಾರೆಂದು ತಿಳಿಸಿದ ಶ್ರೀಪಾದರು ಮತ್ತೆ ತೆರಳಿದ್ದು ವ್ಯಾಕ್ಯಾರ್ಥಗೊಷ್ಠಿಗೆ. ಅಲ್ಲಿ ಹೆಚ್ಚಾ ಕಡಿಮೆ ಮಲಗಿಕೊಂಡು ಚರ್ಚೆಯನ್ನು ಆಲಿಸಿದರು. ರವಿವಾರ ಬೆಂಗಳೂರಿಗೆ ತೆರಳಬೇಕಿದ್ದ ಶ್ರೀಪಾದರು ಮಂಗಳವಾರ ಬೆಂಗಳೂರಿಗೆ ತೆರಳಿ ಅಲ್ಲಿ ಎರಡು ವಾರ ವಿಶ್ರಾಂತಿ ಪಡೆಯುವರು.