ಇರಾ : ಬಂಟ್ವಾಳ ತಾಲೂಕು ಇರಾ ಗ್ರಾಮದ ತಿರುವಾಲೆಯಲ್ಲಿ ಶ್ರೀ ವಯನಾಡು ವಿಷ್ಣುಮೂರ್ತಿ ದೈವಸ್ಥಾನದ ಪುನರ್ ನಿರ್ಮಾಣದ ಧಾರ್ಮಿಕ ವಿಧಿವಿಧಾನಗಳು ರವಿವಾರದಿಂದ ಆರಂಭವಾಗಿದ್ದು, ಸೋಮವಾರ ಗೊನೆ ಮುಹೂರ್ತ ನೆರವೇರಿತು.
ಕರಿಂಬಲ್ಪು ತರವಾಡು ಶ್ರೀ ಸತೀಶ್ ಬೈಚೇರ್ ಪಟ್ಟತ್ತೂರು ಅವರ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಶ್ರೀ ಬಿರ್ಮಣ ಆತಾರ್ ಅವರ ಮಾರ್ಗದರ್ಶನದಲ್ಲಿ ಆಚಾರಪಟ್ಟವರು ಹಾಗೂ ಗುರಿಕಾರರ ಸಲಹೆಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಾ.11ರ ವರೆಗೆ ನಡೆಯಲಿದೆ.
ಮಾ.6 ರಂದು ಸಂಜೆ 4 ಗಂಟೆಗೆ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ ದಿಂದ ಏಕಕಾಲದಲ್ಲಿ ಬೋಳಂತೂರು, ಮಂಚಿ ಗ್ರಾಮ, ಇರಾ ಗ್ರಾಮ ಹಾಗೂ ಸಜಿಪನಡು ವ್ಯಾಪ್ತಿಯ ಬೃಹತ್ ಹೊರೆಕಾಣಿಕೆ ಮೆರವಣಿಗೆಯು ತಿರುವಾಲೆಗೆ ಹೊರಡಲಿದೆ.