Home ಧಾರ್ಮಿಕ ಸುದ್ದಿ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಪ್ರತಿಷ್ಠಾ ವರ್ಧಂತಿ ಉತ್ಸವ, ದೈವದ ನೇಮ

ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಪ್ರತಿಷ್ಠಾ ವರ್ಧಂತಿ ಉತ್ಸವ, ದೈವದ ನೇಮ

1675
0
SHARE

ಬೆಳ್ತಂಗಡಿ: ಓಡಲ ಚಾಮುಂ ಡಿನಗರದ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ ನೇಮ ಸೋಮವಾರ ರಾತ್ರಿ ನೆರವೇರಿತು.

ವರ್ಧಂತಿ ಉತ್ಸವದ ಪ್ರಯುಕ್ತ ಮಹಾಪೂಜೆ, ಪ್ರಸಾದ ವಿತರಣೆ ಸಹಿತ ವಿವಿಧ ಧಾರ್ಮಿಕ ವಿಧಿ- ವಿಧಾನಗಳು ಜರಗಿತು. ಬಳಿಕ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ಅನಂತರ ಉಜಿರೆಯ ಸಂಗಮ ಕಲಾವಿದರಿಂದ ‘ಪಿರ ಬನ್ನಗ’ತುಳು ಹಾಸ್ಯಮಯ ಹಾಗೂ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.

ರಾತ್ರಿ ಶ್ರೀ ವ್ಯಾಘ್ರ ಚಾಮುಂಡಿ ದೈವದ ನೇಮ ಜರಗಿತು. ಈ ಸಂದರ್ಭದಲ್ಲಿ ಸೇವಾ ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಎಂ.ಜಿ. ಶೆಟ್ಟಿ ಹಾಗೂ ಟ್ರಸ್ಟಿಗಳು, ವರ್ಧಂತಿ ಉತ್ಸವ ಸಮಿತಿಯ ಸಂಚಾಲಕ ಎಸ್‌.ವಿ. ಹೆಗ್ಡೆ ಹಾಗೂ ಸಮಿತಿಯ ಸದಸ್ಯರು, ನೂರಾರು ಭಕ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here