Home ಧಾರ್ಮಿಕ ಸುದ್ದಿ ಶ್ರೀ ವಿಬುಧೇಶತೀರ್ಥ ಶ್ರೀಪಾದರ ಪುತ್ಥಳಿ ಅನಾವರಣ

ಶ್ರೀ ವಿಬುಧೇಶತೀರ್ಥ ಶ್ರೀಪಾದರ ಪುತ್ಥಳಿ ಅನಾವರಣ

1756
0
SHARE

ಉಡುಪಿ: ಪೂರ್ಣಪ್ರಜ್ಞ ಸಂಸ್ಥೆಗಳ ಸಂಸ್ಥಾಪಕರೂ ಅದಮಾರು ಮಠಾಧೀಶರೂ ಆಗಿದ್ದ ಶ್ರೀ ವಿಬುಧೇಶ ತೀರ್ಥರ ಶೈಕ್ಷಣಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕೊಡುಗೆಗಳ ಶಾಶ್ವತ ನೆನಪಿಗಾಗಿ ಪೂರ್ಣಪ್ರಜ್ಞ ಕಾಲೇಜಿನ ಕ್ಯಾಂಪಸ್‌ನಲ್ಲಿ ನಿರ್ಮಿಸಲಾದ ವಿಬುಧೇಶತೀರ್ಥ ಶ್ರೀಪಾದರ ಪುತ್ಥಳಿಯನ್ನು ಅವರ ಶಿಷ್ಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮಾಲಾರ್ಪಣೆ ಮಾಡಿ ಅನಾವರಣ ಗೊಳಿಸಿದರು.

ತಮ್ಮ ಗುರು ಶ್ರೀ ವಿಬುಧೇಶತೀರ್ಥರ ಶೈಕ್ಷಣಿಕ, ಆಧ್ಯಾತ್ಮಿಕ, ಸಾಮಾಜಿಕ ಕಾಳಜಿ ಸ್ಮರಿಸಿಕೊಂಡ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅವರಲ್ಲಿದ್ದ ವಿಶಿಷ್ಟ ಗುಣಗಳನ್ನು ಕೊಂಡಾಡಿದರು. ಕಾಲೇಜಿನ ಗೌರವ ಕಾರ್ಯದರ್ಶಿ ಡಾ| ಜಿ.ಎಸ್‌. ಚಂದ್ರಶೇಖರ್‌, ಗೌರವ ಕೋಶಾಧಿ ಕಾರಿ ಪ್ರದೀಪ್‌ ಕುಮಾರ್‌, ಪ್ರಾಂಶುಪಾಲರಾದ ಡಾ| ಬಿ. ಜಗದೀಶ್‌ ಶೆಟ್ಟಿ, ಡಾ| ಸುಕನ್ಯಾ, ಸಂದೀಪ್‌ಕುಮಾರ್‌, ಎಂಬಿಎ ನಿರ್ದೇಶಕ ಪೊ›| ಭರತ್‌, ಆಡಳಿತಾಧಿಕಾರಿ ಪೊ›| ಕಿಶೋರ್‌ ರಾವ್‌, ಕಾಲೇಜಿನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬಂದಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ| ಶ್ರೀಕಾಂತ್‌ ಸಿದ್ದಾಪುರ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here