Home ಧಾರ್ಮಿಕ ಸುದ್ದಿ ರಥಬೀದಿಯ ಶ್ರೀ ವೆಂಕಟ್ರಮಣ ದೇವಸ್ಥಾನ: ನೂತನ ಮೊಕ್ತೇಸರರಿಗೆ ಅಧಿಕಾರ ಹಸ್ತಾಂತರ

ರಥಬೀದಿಯ ಶ್ರೀ ವೆಂಕಟ್ರಮಣ ದೇವಸ್ಥಾನ: ನೂತನ ಮೊಕ್ತೇಸರರಿಗೆ ಅಧಿಕಾರ ಹಸ್ತಾಂತರ

1367
0
SHARE

ಮಂಗಳೂರು : ರಥಬೀದಿಯ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಜು. 28ರಂದು ನಡೆದ ಸರಳ ಸಮಾರಂಭದಲ್ಲಿ ನಿರ್ಗಮನ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಪದ್ಮನಾಭ ಪೈ, ಜಯರಾಜ್‌ ಪೈ ಅವರಿಂದ ಇತ್ತೀಚೆಗೆ ನಡೆದ ಚುನಾವಣಾ ಮಹಾಸಭೆಯಲ್ಲಿ ನೂತನ ಮೊಕ್ತೇಸರರಾಗಿ ಆಯ್ಕೆಗೊಂಡ ರಾಮಚಂದ್ರ ಕಾಮತ್‌, ಕೆ.ಪಿ. ಪ್ರಶಾಂತ್‌ ರಾವ್‌, ಸಿ.ಎಲ್‌. ಶೆಣೈ ಅವರಿಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಶ್ರೀ ದೇವರ ಸಮ್ಮುಖದಲ್ಲಿ ನಡೆಯಿತು.

ದೇಗುಲದ ಸ್ವಯಂಸೇವಕರ ವತಿ ಯಿಂದ ಅಡಿಗೆ ಬಾಲಕೃಷ್ಣ ಶೆಣೈ, ಪದ್ಮನಾಭ ಪೈ ಹಾಗೂ ಜಯರಾಜ್‌ ಪೈ ಅವರನ್ನು ಸಮ್ಮಾನಿಸಲಾಯಿತು. ಈ ಮಾತನಾಡಿದ ಪದ್ಮನಾಭ ಪೈ ಅವರು, ಶಕ್ತಿ ಮೀರಿ ಶ್ರೀ ದೇವರ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿದ್ದೇವೆ ಎಂಬ ಸಂತೋಷ ನಮ್ಮಲ್ಲಿದೆ. ನಮ್ಮ ಅಡಳಿತದ ಅವಧಿಯಲ್ಲಿ ಎಲ್ಲ ಆಯಾಮ ಗಳಲ್ಲಿ ಸಹಕಾರ ನೀಡಿದ ದೇಗುಲದ ತಂತ್ರಿಗಳಿಗೆ, ಸ್ವಯಂಸೇವಕರು, ಸಿಬಂದಿ ವರ್ಗ, ಅರ್ಚಕರಿಗೆ ನಾವು ಚಿರಋಣಿಯಾಗಿರುತ್ತೇವೆ ಎಂದರು.

LEAVE A REPLY

Please enter your comment!
Please enter your name here