Home ಧಾರ್ಮಿಕ ಕಾರ್ಯಕ್ರಮ ಶ್ರೀ ವೀರಭದ್ರ ದೇವರ ಪಂಚಮಿ ಉತ್ಸವ

ಶ್ರೀ ವೀರಭದ್ರ ದೇವರ ಪಂಚಮಿ ಉತ್ಸವ

2078
0
SHARE

ಮಹಾನಗರ : ಮಂಗಳೂರಿನ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಯುಗಾದಿ ಮಹೋತ್ಸವದ ಪ್ರಯುಕ್ತ ಶ್ರೀ ಗುರುಮಠದ ಶ್ರೀ ವೀರಭದ್ರ ದೇವರ ಪಂಚಮಿ ಉತ್ಸವ ಗುರುವಾರ ಲಾಲಕ್ಕಿಯಲ್ಲಿ ಶ್ರೀ ಕ್ಷೇತ್ರದಿಂದ ಟೆಂಪಲ್‌ ಸ್ಕ್ವೇರ್‌ ವರೆಗೆ ತೆರಳಿ ಶ್ರೀ ಕ್ಷೇತ್ರಕ್ಕೆ ಆಗಮಿಸಿತು. ಕ್ಷೇತ್ರದ ಪ್ರಧಾನ ತಂತ್ರಿಗಳಾದ ಲಕ್ಷ್ಮೀಕಾಂತ ಶರ್ಮ ಅವರ ಮುಂದಾಳತ್ವ ವಹಿಸಿದ್ದರು.

ಕ್ಷೇತ್ರದ ಪ್ರಧಾನ ಅರ್ಚಕ ಧನಂಜಯ ಪುರೋಹಿತ್‌, ವಿಘ್ನೇಶ್‌ ಪುರೋಹಿತ್‌, ಗುರುಮಠದ ಸುದರ್ಶನ್‌ ಪುರೋಹಿತ್‌, ಸತೀಶ್‌ ಪುರೋಹಿತ್‌, ಕ್ಷೇತ್ರದ ಆಡಳಿತ ಮೊಕ್ತೇಸರ ಕೆ. ಕೇಶವ ಅಚಾರ್‌, ಮೊಕ್ತೇಸರರಾದ ಸುಂದರ ಆಚಾರ್ಯ ಬೆಳುವಾಯಿ, ಎ. ಲೋಕೇಶ್‌ ಆಚಾರ್ಯ ಬಿಜೈ, ಆಡಳಿತ ಮಂಡಳಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ವಿಶ್ವಕರ್ಮ ಯುವ ವೇದಿಕೆ, ವಿಶ್ವಕರ್ಮ ಯುವ ಮಿಲನ ಸದಸ್ಯರು ಹಾಗು ಅನೇಕ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here