ಸುರತ್ಕಲ್: ನವದುರ್ಗಾ ಫ್ರೆಂಡ್ಸ್ ಸರ್ಕಲ್ ರಥಬೀದಿ ಇಲ್ಲಿನ ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವ ಸ್ಥಾನದ ನವೀಕೃತ ಶಿಲಾಮಯ ಅಶ್ವತ್ಥಕಟ್ಟೆಯ ಸಮರ್ಪಣೆ ಶನಿವಾರ ಜರಗಿತು.
ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವೇ| ಮೂ| ಐ. ರಮಾನಂದ ಭಟ್ ಉದ್ಘಾಟಿಸಿ, ಶುಭಹಾರೈಸಿದರು. ಭದ್ರವಾದ ಶಿಲಾಮಯ ಅಶ್ವತ್ಥ ಮರದಿಂದ ಸ್ಥಳೀಯರೆಲ್ಲರಿಗೂ ಶಾಂತಿ ನೆಮ್ಮದಿಯ ಪ್ರಶಸ್ತ ಸ್ಥಳವಾಗಿದೆ. ವೃಕ್ಷಗಳಲ್ಲಿ ಅಶ್ವತ್ಥ , ಗಿಡಗಳಲ್ಲಿ ತುಳಸಿ ಬಹಳ ಶ್ರೇಷ್ಠ. ಅಶ್ವತ್ಥ ವೃಕ್ಷ ಇಲ್ಲದ ಯಾವುದೇ ದೇವಸ್ಥಾನವಿಲ್ಲ. ಅದರಲ್ಲಿ ತ್ರಿಮೂರ್ತಿಗಳ ಸಾಕ್ಷಾತ್ಕಾರ ಇದ್ದೇ ಇದೆ. ಯಾವುದೇ ಕಾರ್ಯಗಳು ಅಶ್ವತ್ಥ ಬುಡ ದಲ್ಲಿ ಮಾಡಿದಲ್ಲಿ ಅದು ಸಂಪೂ ರ್ಣ ಯಶಸ್ವಿಯಾಗುತ್ತದೆ ಎಂದರು.
ನಿನಾದ ಟ್ರಸ್ಟ್ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷತೆ ವಹಿಸಿದ್ದರು. ಬಿ.ಎ.ಎಸ್.ಎಫ್. ಅಸಿ ಸ್ಟೆಂಟ್ ಮ್ಯಾನೇಜರ್ ಸಂತೋಷ್ ಪೈ ಕೊಡಿಪಾಡಿ ಖಂಡಿಗೆ ಸಿವಿಲ್ ಕಾಂಟ್ರಾಕ್ಟರ್ ಪಾಂಡುರಂಗ ಪ್ರಭು, ಉದ್ಯಮಿ ರಮೇಶ್ ಟಿ.ಎನ್. ಸುರತ್ಕಲ್, ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘ ಉಚ್ಚಿಲ ಮಾಜಿ ಅಧ್ಯಕ್ಷ ಗಂಗಾಧರ ಕರ್ಕೇರ ಹೊಸಬೆಟ್ಟು, ಉದ್ಯಮಿ ಧನಂಜಯ ಮಟ್ಟು, ನಿವೃತ್ತ ವಾಯು ಸೇನಾಧಿಕಾರಿ, ಬೈಕಂಪಾಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಬಾಳ, ಉದ್ಯಮಿ ರಮನಾಥ ಶೆಟ್ಟಿ ಕೃಷ್ಣಾಪುರ, ಸುಪ್ರೀಂ ಕಲ್ಯಾಣ ಮಂಟಪ ಸುರತ್ಕಲ್ ಮಾಲಕ ಸಿಪ್ರಿಯನ್ ಡಿ’ಸೋಜಾ, ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ರಥಬೀದಿ ಸುರತ್ಕಲ್, ಮಿಜಾರು ಮಾಗಣೆ ಗುರಿಕಾರ ತುಕರಾಮ ಶೆಟ್ಟಿಗಾರ್, ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ರಥಬೀದಿ ಸುರತ್ಕಲ್ ಅರ್ಚಕ ವೆಂಕಟ್ರಮಣ ಮಯ್ಯ ಸುರತ್ಕಲ್, ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ರಥಬೀದಿ ಸುರತ್ಕಲ್ ಮತ್ತು ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನ, ಸುರತ್ಕಲ್ ಆಡಳಿತ ಮೊಕ್ತೇಸರ ಚಂದಪ್ಪ ಗುರಿಕಾರ ಸುರತ್ಕಲ್, ಉದ್ಯಮಿ ಶಿವ ಪ್ರಸಾದ್ ಮಯ್ಯ, ಓಂ ಪ್ರಕಾಶ್ ಶೆಟ್ಟಿಗಾರ್, ನವದುರ್ಗಾ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ವರುಣ್ ಶೆಟ್ಟಿಗಾರ್, ಕಾರ್ಯದರ್ಶಿ ಅನಂತರಾಜ್.ಎಸ್ ಉಪಸ್ಥಿತರಿದ್ದರು.
ಗೌರವ ಸಲಹೆಗಾರ ಮಹೇಶ್ ಮೂರ್ತಿ ಸುರತ್ಕಲ್ ಸ್ವಾಗತಿಸಿ ವಂದಿಸಿ ದರು. ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.