Home ಧಾರ್ಮಿಕ ಸುದ್ದಿ ಶ್ರೀ ವೀರ ವೆಂಕಟೇಶ ದೇವರ ಪುನಃ ಪ್ರತಿಷ್ಠಾ ವರ್ಧಂತಿ

ಶ್ರೀ ವೀರ ವೆಂಕಟೇಶ ದೇವರ ಪುನಃ ಪ್ರತಿಷ್ಠಾ ವರ್ಧಂತಿ

345
0
SHARE

ಮಹಾನಗರ: ನಗರದ ರಥಬೀದಿ ಶ್ರೀ ವೀರ ವೆಂಕಟೇಶ ದೇವರ ಪುನಃ ಪ್ರತಿಷ್ಠಾ ವರ್ಧಂತಿ ಇತ್ತೀಚೆಗೆ ನಡೆಯಿತು. ಬೆಳಗ್ಗೆ ಪಂಚಾಮೃತಾಭಿಷೇಕ, ಶತಕಲಶಾ ಭಿಷೇಕ, ಪುಳಕಾಭಿಷೇಕ, ಕನಕಾಭಿಷೇಕ, ಬ್ರಹ್ಮಕಲಶಾಭಿಷೇಕಗಳು ಪಂಡಿತ್‌ ನರಸಿಂಹ ಆಚಾರ್ಯ ಅವರ ನೇತೃತ್ವದಲ್ಲಿ ನಡೆದವು. ರಾತ್ರಿ ಪೂಜೆಯ ಬಳಿಕ ಬೆಳ್ಳಿ ಲಾಲಕಿಯಲ್ಲಿ ಪೇಟೆ ಉತ್ಸವ ಜರಗಿತು. ದೇವಸ್ಥಾನವನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ದೇಗುಲದ ಪ್ರಧಾನ ಅರ್ಚಕರಾದ ನರಸಿಂಹ ಭಟ್, ಹರೀಶ್‌ ಭಟ್, ಮೊಕ್ತೇಸರ ಸಿ.ಎಲ್‌. ಶೆಣೈ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here