Home ಧಾರ್ಮಿಕ ಸುದ್ದಿ ಶ್ರೀ ಉಳ್ಳೂರು ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನ: ಷಷ್ಠಿ ಉತ್ಸವ

ಶ್ರೀ ಉಳ್ಳೂರು ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನ: ಷಷ್ಠಿ ಉತ್ಸವ

534
0
SHARE

ಬಸ್ರೂರು: ಕಂದಾವರ ಶ್ರೀ ಉಳ್ಳೂರು ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವಂತೆ ಷಷ್ಠಿ ಮಹೋತ್ಸವ, ರಂಗಪೂಜೆ ಮತ್ತು ಮಂಡಲ ಸೇವೆಗಳು ಡಿ.13ರಂದು ನಡೆಯಲಿದೆ.

ಬೆಳಗ್ಗೆ 11.30ಕ್ಕೆ ದೇವಳದ ಒಳ ಪ್ರಾಕಾರ ನಿರ್ಮಾಣದ ಶಿಲಾನ್ಯಾಸ, ಅಪರಾಹ್ನ 3ಕ್ಕೆ ಶ್ರೀ ದೇವಳದ ಧರ್ಮದರ್ಶಿಯಾಗಿ 42 ವರ್ಷ ಸೇವೆ ಪೂರೈಸಿದ ಬಳ್ಕೂರು ಬಡಾಹಾಡಿ ಸುಬ್ರಾಯ ಉಡುಪಿ ಅವರ ಅಭಿನಂದನಾ ಸಭೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ಜ.16ರಂದು ಬುಧವಾರ ಶ್ರೀಮನ್ಮಹಾರಥೋತ್ಸವ, ಜ.18ರಂದು ಶನಿವಾರ ರುದ್ರೈಕಾದಶೀ ಹೋಮ ಹಾಗೂ ಜ.19ರಂದು ರವಿವಾರ ವರ್ಧಂತಿ ಉತ್ಸವ ಹಾಗೂ 120 ನಾರಿಕೇಳ ಮಹಾಗಣಪತಿಯಾಗ ಜರಗಲಿರುವುದು ಎಂದು ದೇವಳದ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here