Home ಧಾರ್ಮಿಕ ಸುದ್ದಿ ಶ್ರೀ ಸುಬ್ರಹ್ಮಣ್ಯ ದೇವರ ಚಿಕ್ಕ ರಥೋತ್ಸವ

ಶ್ರೀ ಸುಬ್ರಹ್ಮಣ್ಯ ದೇವರ ಚಿಕ್ಕ ರಥೋತ್ಸವ

126
0
SHARE

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ವಾರ್ಷಿಕ ದಿನಾಚರಣೆಯ ಪ್ರಯುಕ್ತ ಮಂಗಳವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಿಕ್ಕ
ರಥೋತ್ಸವವು ಜರಗಿತು.

ದೇಗುಲದಲ್ಲಿ ಪಂಚಾಮೃತ ಮಹಾಭಿಷೇಕವು ನೆರವೇರಿತು. ರಾತ್ರಿ ಮಹಾಪೂಜೆಯ ಬಳಿಕ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ನಡೆಯಿತು. ಮಂಗಳವಾರ ಆಶ್ಲೇಷ ನಕ್ಷತ್ರದ ಪುಣ್ಯ
ದಿನವಾದ್ದರಿಂದ ಮಹಾಪೂಜೆ ಅನಂತರ ಹೊರಾಂಗಣದಲ್ಲಿ ಶ್ರೀ ದೇವರ ಪಾಲಕಿ ಮತ್ತು ಬಂಡಿ ಉತ್ಸವಗಳು ನಡೆಯಿತು.

ಬಳಿಕ ರಥಬೀದಿಯಲ್ಲಿ ಕುಕ್ಕೆ ಶ್ರೀ ದೇವರ ಚಿಕ್ಕರಥೋತ್ಸವ ನೆರವೇರಿತು. ವಿದ್ಯುದ್ದೀಪಗಳಿಂದ ಅಲಂಕೃತವಾದ ರಥದಲ್ಲಿ ಶ್ರೀ ದೇವರು ಉತ್ಸವದಲ್ಲಿ ಕಾಶಿಕಟ್ಟೆಗೆ ತೆರಳಿದರು.

ಬಳಿಕ ಶ್ರೀ ದೇಗುಲಕ್ಕೆ ದೇವರು ಮರಳಿದರು. ಅನಂತರ ದೇಗುಲದಲ್ಲಿ ಶ್ರೀ ದೇವರಿಗೆ ಮಂಟಪ ಪೂಜೆ ನಡೆಯಿತು.

LEAVE A REPLY

Please enter your comment!
Please enter your name here