ಪೆರ್ಮುದೆ: ಇಲ್ಲಿನ ಶ್ರೀ ಸೋಮ ನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ರಥೋತ್ಸವ ಜರಗಿತು.
ಬೆಳಗ್ಗೆ ಕವಾಟೋದ್ಘಾಟನೆ, ಪೂಜೆ, ತುಲಾಭಾರ, ಪೆರ್ಮುದೆ ಪಾರಾಳೆ ಗುತ್ತಿನಿಂದ ಕೊಡಮಣಿತ್ತಾಯ ಮತ್ತು ಮುಕ್ಕೋಡಿ ಮನೆಯಿಂದ ಪಿಲಿಚಾಂಡಿ ದೈವಗಳ ಭಂಡಾರ ಬಂದು ಮಧ್ಯಾಹ್ನ ಎಡಪದವು ಬ್ರಹ್ಮಶ್ರೀ ರಾಧಾಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಚೂರ್ಣೋತ್ಸವ, ರಥೋತ್ಸವ ಜರಗಿತು.
ಈ ಸಂದರ್ಭ ದೇವಸ್ಥಾನದ ಅರ್ಚಕ ಹರಿಹೊಳ್ಳ, ವ್ಯವಸ್ಥಾಪನ ಸಮಿ ತಿಯ ಅಧ್ಯಕ್ಷ ಪೆರ್ಮುದೆ ಪಾರಾಳೆಗುತ್ತು ಭುಜಂಗ ಚೌಟ, ಸಮಿತಿಯ ಸದಸ್ಯರಾದ ಶೇಖರ ಶೆಟ್ಟಿ, ವೇದವ್ಯಾಸ ರಾವ್, ಯಾದವ ಕೋಟ್ಯಾನ್, ದೀಪಕ್ ಪೆರ್ಮುದೆ, ಸುಮಿತ್ರಾ ಉಪಾಧ್ಯಾಯ, ಉಷಾ ಶೆಟ್ಟಿ , ಶಿವ , ಊರಿನ ಭಕ್ತರು ಉಪಸ್ಥಿತರಿದ್ದರು.