Home ಧಾರ್ಮಿಕ ಸುದ್ದಿ ಶಾರದಾನಿಕೇತನದಲ್ಲಿ ಶ್ರೀ ಶಾರದಾ ಮಾತೆ ಪ್ರತಿಷ್ಠೆ

ಶಾರದಾನಿಕೇತನದಲ್ಲಿ ಶ್ರೀ ಶಾರದಾ ಮಾತೆ ಪ್ರತಿಷ್ಠೆ

1570
0
SHARE

ಮಹಾನಗರ : ನಗರದ ಚಿಲಿಂಬಿಯಲ್ಲಿ 51 ವರ್ಷಗಳಿಂದ ನಡೆಸಿ ಕೊಂಡು ಬರುತ್ತಿರುವ ಬಾಲಕರ ಶ್ರೀ ಶಾರದ ಮಹೋತ್ಸವದ ವತಿಯಿಂದ ಪ್ರತಿಷ್ಠಾಪಿಸುತ್ತ
ಬರುತ್ತಿರುವ ಶ್ರೀ ಶಾರದ ಮಾತೆಯ ಪ್ರತಿಷ್ಠೆಯು ಪಂಚಲಿಂಗೇಶ್ವರ ದೇವಸ್ಥಾನದ ರಮೇಶ ತಂತ್ರಿಯವರ ಪೌರೋಹಿತ್ಯದಲ್ಲಿ ಶಾರದಾ ನಿಕೇತನದಲ್ಲಿ ಜರಗಿತು.

ಸಾಲಿಗ್ರಾಮ ರಮಾನಂದ ನಾಯಕ್‌ ಮತ್ತು ಅನುಪಮಾ ನಾಯಕ್‌ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶಾರದಾ ಮಹೋತ್ಸವ ಟ್ರಸ್ಟ್‌ ಕಮಿಟಿಯ ಅಧ್ಯಕ್ಷ ಲೋಕನಾಥ ಬಂಗೇರ, ಕಾರ್ಯದರ್ಶಿ ಎಸ್‌. ಸುಬ್ರಾಯ ನಾಯಕ್‌, ಸಮಿತಿಯ ಅಧ್ಯಕ್ಷ ಮಂಜು ಚಂದ್ರಕುಮಾರ್‌, ಗೌರವಾಧ್ಯಕ್ಷ ದುಗೇಶ್‌ ಚೆಟ್ಟಿಯಾರ್‌, ಪ್ರಭಾರ ಕಾರ್ಯದರ್ಶಿ ವಿಜೇಂದ್ರ, ಶಾರದಾ ಮಹಿಳಾ ಮಂಡಳಿ ಅಧ್ಯಕ್ಷೆ ಹರಿಣಿ ವಿಜೇಂದ್ರ, ಗೌರವ ಅಧ್ಯಕ್ಷೆ ಪೂರ್ಣಿಮಾ ಕದ್ರಿ, ಕಾರ್ಯದರ್ಶಿ ಜಯಲಕ್ಷ್ಮೀ, ವಿದ್ಯಾ ಕಾಮತ್‌, ಸುಧಾಕರ ರಾವ್‌, ಚಂದ್ರಹಾಸ, ಶರ್ಮಿಳಾ ರಘುರಾಮ್‌ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here