Home ಧಾರ್ಮಿಕ ಸುದ್ದಿ ಶ್ರೀ ಸತ್ಯನಾರಾಯಣ ಪೂಜೆ, ಪಲ್ಲಪೂಜೆ

ಶ್ರೀ ಸತ್ಯನಾರಾಯಣ ಪೂಜೆ, ಪಲ್ಲಪೂಜೆ

1523
0
SHARE

ಬಜಪೆ : ಕೊಳಂಬೆಯ ವಿಟ್ಲಬೆಟ್ಟು ಶ್ರೀ ಜನಾರ್ದನ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಸೋಮವಾರ ಬ್ರಹ್ಮ ಕಲಶಾಭಿಷೇಕ ಜರಗಿತು. ಈ ಸಂದರ್ಭ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪಲ್ಲಪೂಜೆ ಜರಗಿತು.

ಪಲ್ಲಪೂಜೆಯ ಅನಂತರ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಜರಗಿತು. ಕುಡುಪು ಬ್ರಹ್ಮಶ್ರೀ ನರಸಿಂಹ ತಂತ್ರಿ ಅವರ ನೇತೃತ್ವದಲ್ಲಿ ದೇಗುಲ ದ ಪ್ರಧಾನ ಅರ್ಚಕ ಲಕ್ಷ್ಮೀಶ್‌ ಭಟ್‌, ಅದ್ಯಪಾಡಿ ದೇಗುಲದ ಅರ್ಚಕ ಸದಾಶಿವ ಭಟ್‌ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ಕಾರ್ಯಕ್ರಮ ಜರ ಗಿತು.

ಬ್ರಹ್ಮಕಲಶಾಭಿಷೇಕದ ಮಾರ್ಗದರ್ಶಕ ಮಂಜುನಾಥ ಭಂಡಾರಿ ಶೆಡೆÂ, ದೇವ ಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೆ.ವಿ. ರಾಮಕೃಷ್ಣ ಭಟ್‌, ಬ್ರಹ್ಮಕಲಶೋ ತ್ಸವದ ಕಾರ್ಯಾಧ್ಯಕ್ಷ ಜಗೇಶ್‌ ಶೆಟ್ಟಿ ಉಣಿಲೆಭಾವ, ಸಮಿತಿಯ ಕಾರ್ಯದರ್ಶಿ ವಿನೋಧರ ಪೂಜಾರಿ ತಲ್ಲದಬೈಲು, ಕೋಶಾಧಿಕಾರಿ ಶಿವರಾಮ ಕುಲಾಲ್‌ ವಿಟ್ಲಬೆಟ್ಟು, ವಿಶ್ವನಾಥ ರೈ, ಕೇಶವ ಮಾಸ್ಟರ್‌, ನಾರಾಯಣ ಬಿ., ಜಗನ್ನಾಥ ರೈ, ರಾಜೀವ ಆಳ್ವ, ದೇವದಾಸ್‌ ನಾಯಕ್‌, ಚಂದ್ರಹಾಸ ರೈ, ಹರಿಯಪ್ಪ ಶೆಟ್ಟಿ, ಹರೀಶ್‌ ಶೆಟ್ಟಿ ಬೈಲು ಏತಮೊಗರುಗುತ್ತು ದೊಡ್ಡಮನೆ, ಬಾಲಕೃಷ್ಣ ಶೆಟ್ಟಿ ನಂದಬೆಟ್ಟು, ಬಾಲಕೃಷ್ಣ ಭಂಡಾರಿ, ಜಿ. ಶಿವರಾಮ ಹೆಗ್ಡೆ, ವಿಜಯ ಶೆಟ್ಟಿ ಕಲ್ಲೋಳೆ, ವಿನೋದ್‌ ಶೆಟ್ಟಿ, ಜಗನ್ನಾಥ ರೈ ಕೆಳಗಿನ ಮನೆ, ಸುಂದರ್‌ ರಾಜ್‌ ಶೆಟ್ಟಿ, ಎನ್‌.ಮುರಳೀಧರ ಶೆಟ್ಟಿ , ಸೂರಜ್‌ ಭಂಡಾರಿ ಬೈಲು ಹೊಸಮನೆ, ಸತೀಶ್‌ ಶೆಟ್ಟಿ , ಉಮೇಶ್‌ ಆರ್‌.ಭಂಡಾರಿ, ಸುಕೇಶ್‌ ಮಾಣಾç, ದಯಾ ನಂದ ಅಮೀನ್‌ ಮುರನಗರ, ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಶಾಸಕ ಡಾ| ವೈ. ಭರತ್‌ ಶೆಟ್ಟಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿದರು.

LEAVE A REPLY

Please enter your comment!
Please enter your name here