ಬನ್ನೂರು : ಬನ್ನೂರು ಸ್ಫೂರ್ತಿ ಯುವಕ, ಯುವತಿ ಮಂಡಲ, ಸ್ಫೂರ್ತಿ ಮಹಿಳಾ ಮಂಡಲ, ಸ್ಫೂರ್ತಿ ಬಾಲ ಸಭಾ
ವತಿಯಿಂದ ಸ್ಫೂರ್ತಿ ಮೈದಾನದಲ್ಲಿರುವ ಶ್ರೀ ಶನೀಶ್ವರ ಸನ್ನಿಧಿಯಲ್ಲಿ ವರ್ಷಂಪ್ರತಿಯಂತೆ ಶಾಂತಿಗಾಗಿ ಶ್ರೀ ಸತ್ಯನಾರಾಯಣ ಪೂಜೆ ಜರಗಿತು.
ಜಗದೀಶ್ ಶಾಂತಿ ಅವರು ಪೂಜೆ ನೆರವೇರಿಸಿಕೊಟ್ಟರು. ಸಂಸ್ಥೆ ಸಂಚಾಲಕ ದಿನೇಶ್ ಸಾಲಿಯಾನ್, ಅಧ್ಯಕ್ಷ ವಿಶ್ವನಾಥ ನಾಯ್ಕ, ಉಪಾಧ್ಯಕ್ಷ ಹರೀಶ್ ಬಿ.ಎನ್., ಕಾರ್ಯದರ್ಶಿ ದೀಪಕ್ ಆಚಾರ್ಯ, ಜತೆ ಕಾರ್ಯದರ್ಶಿ ಆದರ್ಶ್ ಸಾಲಿಯಾನ್, ಕೋಶಾಧಿಕಾರಿ ಸೂರ್ಯ ಕೋಟ್ಯಾನ್, ಸಂಘಟನ ಕಾರ್ಯದರ್ಶಿ ನವೀನ್ ರೈ, ಸಲಹೆಗಾರರಾದ ಹೇಮಚಂದ್ರ, ಕುಶಾಲ ಬಿ., ಚಂದ್ರಹಾಸ ರೈ, ಗೌರವಾಧ್ಯಕ್ಷ ನಾಗೇಶ್ ಎನ್. ಸದಸ್ಯರು ಉಪಸ್ಥಿತರಿದ್ದರು.