Home Uncategorized ಅಗಳಿ ಶ್ರೀ ಸದಾಶಿವ ದೇವರ ಪ್ರತಿಷ್ಠಾಪನ ಜಾತ್ರೆ, ಉತ್ಸವ ಬಲಿ

ಅಗಳಿ ಶ್ರೀ ಸದಾಶಿವ ದೇವರ ಪ್ರತಿಷ್ಠಾಪನ ಜಾತ್ರೆ, ಉತ್ಸವ ಬಲಿ

630
0
SHARE

ಕಾಣಿಯೂರು ಮೇ 4: ಕಾçಮಣ ಗ್ರಾಮದ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಪುನರ್‌ ಪ್ರತಿಷ್ಠಾಪನ ಜಾತೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.

ಪುನರ್‌ ಪ್ರತಿಷ್ಠಾಪನ ಜಾತ್ರೆ ಅಂಗವಾಗಿ ಬೆಳಗ್ಗೆ ತೋರಣ ಮುಹೂರ್ತ, ಹಸಿರುವಾಣಿ ಸಮರ್ಪಣೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಂಜೆ ತಂತ್ರಿಗಳ ಆಗಮನ, ರಾತ್ರಿ ಪ್ರಾರ್ಥನೆ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ, ವಾಸ್ತು ಕಲಶಾ ಭಿಷೇಕ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.

ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯ ಜಗನ್ನಿವಾಸ್‌ ರಾವ್‌ಎನ್‌.ಕೆ. ಅವರು ಕಾರ್ಯಾಲಯ ಉದ್ಘಾಟಿಸಿದರು. ನ್ಯಾಯವಾದಿ ಮೋಹನ್‌ ಗೌಡ ಇಡ್ಯಡ್ಕ, ಗೋಪಾಲ ಕೃಷ್ಣ ಭಟ್‌ ಮುಂಡಾಳ, ದೇವಸ್ಥಾನದ ಆನುವಂಶೀಯ ಮೊಕ್ತೇಸರ ಶಿವರಾಮ ಗೌಡ ಅಗಳಿ, ಉದಯ ಕುಮಾರ್‌ ಅಗಳಿ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಮೋನಪ್ಪ ಗೌಡ ಕೂರೋಡಿ, ಹರೀಶ್‌ ಮುಂಡಾಳ, ಸತೀಶ್‌ ಮಾರ್ಕಜೆ, ಶೋಭಾ ಏನೇಕಲ್‌, ತಾರಾ ಬೆಳಂದೂರು, ಕೇಶವ ಜೇಡರಕೇರಿ ಉಪಸ್ಥಿತರಿದ್ದರು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪದ್ಮಯ್ಯ ಗೌಡ ಕರಂದ್ಲಾಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಮಿತಿ ಸದಸ್ಯೆ ಶೋಭಾ ಏನೇಕಲ್ಲು ವಂದಿಸಿದರು. ಸೀತಾರಾಮ ಗೌಡ ಮುಂಡಾಳ ಕಾರ್ಯಕ್ರಮ ನಿರೂಪಿಸಿದರು.

ಗೌರವಾರ್ಪಣೆ
ಬಳಿಕ ದಾನಿಗಳಿಗೆ, ದೇವರಿಗೆ ಪುಷ್ಪ ಕನ್ನಡಿಯ ಸೇರ್ವಾರ್ಥಿಗಳು ಹಾಗೂ ಜಾತ್ರೆಯಂದು ಅನ್ನಸಂತರ್ಪಣೆ ಸೇವೆ ಮಾಡುತ್ತಿರುವ ಅಗಳಿ ಕುಂಞಣ್ಣ ಗೌಡ ದಂಪತಿಯನ್ನು ಗುರುತಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾçಮಣ ಹಾಗೂ ಬೆಳಂದೂರು ಅಂಗನವಾಡಿ ಕೇಂದ್ರಗಳಿ ಪುಟಾಣಿಗಳಿಂದ ನೃತ್ಯ, ಕಾಣಿಯೂರು ಸಾಂಸ್ಕೃತಿಕ ಕಲಾ ಕೇಂದ್ರದ ಸದಸ್ಯರಿಂದ ಸಾಂಸ್ಕೃತಿಕ ವೈವಿಧ್ಯ, ಕಲ್ಮಡ್ಕ ಶ್ರೀರಾಮ ನಾಟಕ ಕಲಾ ಸಂಘದವರಿಂದ “ದುರಂತ ದುಡಿ’ ತುಳು ನಾಟಕ ನಡೆಯಿತು.

ದೈಗಳ ನೇಮ
ಮರುದಿನ ಬೆಳಗ್ಗೆ ಗಣಪತಿ ಹವನ, ಶ್ರೀ ದೇವರಿಗೆ ಪುಷ್ಪ ಕನ್ನಡಿಯ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ದೀಪಾರಾಧನೆ, ರಾತ್ರಿ ರಂಗಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ, ಅನ್ನ ಸಂತರ್ಪಣೆ ನೆರವೇರಿತು. ಬಳಿಕ ಶ್ರೀ ಉಳ್ಳಾಕುಲು ಮತ್ತು ರಕ್ತೇಶ್ವರಿ ದೈವಗಳ ನೇಮ ನಡೆಯಿತು.

LEAVE A REPLY

Please enter your comment!
Please enter your name here