Home ಧಾರ್ಮಿಕ ಸುದ್ದಿ ಶ್ರೀ ರಾಮ ತಾರಕ ಯಜ್ಞ ಆಮಂತ್ರಣ ಪತ್ರಿಕೆ ಬಿಡುಗಡೆ

ಶ್ರೀ ರಾಮ ತಾರಕ ಯಜ್ಞ ಆಮಂತ್ರಣ ಪತ್ರಿಕೆ ಬಿಡುಗಡೆ

1743
0
SHARE

ಕಾಸರಗೋಡು : ಕೋಟೆಕಣಿಯ ಶ್ರೀ ರಾಮನಾಥ ದೇವಸ್ಥಾನದಲ್ಲಿ ರಾಮನವಮಿಯ ಅಂಗವಾಗಿ ಮಾ.25 ರಂದು ನಡೆಯುವ ಶ್ರೀ ರಾಮ ತಾರಕ ಯಜ್ಞದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಯಜ್ಞ ಸಮಿತಿ ಅಧ್ಯಕ್ಷ ಕೃಷ್ಣ ಪ್ರಸಾದ್‌ ಕೋಟೆಕಣಿ ಅವರು ಮಹಿಳಾ ಸಮಿತಿ ಅಧ್ಯಕ್ಷೆ ಪ್ರೇಮ ಎಲ್ಲೋಜಿ ರಾವ್‌ ಅವರಿಗೆ ನೀಡುವ ಮೂಲಕ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣ ಪ್ರಸಾದ್‌ ಅವರು ರಾಮ ತಾರಕ ಯಜ್ಞದ ಯಶಸ್ಸಿಗೆ ಅರ್ಪಣಾ ಮನೋಭಾವದಿಂದ ದುಡಿಯುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಕಾಸರಗೋಡಿನಲ್ಲಿ ಅಪರೂಪವಾಗಿ ನಡೆಯುತ್ತಿರುವ ರಾಮ ತಾರಕ ಯಜ್ಞದಿಂದ ಮಳೆ, ಬೆಳೆ, ಆರೋಗ್ಯ ಜತೆಯಲ್ಲಿ ಭೂಮಾತೆ ಸಂತುಷ್ಟಳಾಗಿ ಸಕಲ ಭೋಗಭಾಗ್ಯಗಳನ್ನು ಕರುಣಿಸುವಳು. ಈ ಹಿನ್ನೆಲೆಯಿಂದ ರಾಮ ತಾರಕ ಯಜ್ಞಕ್ಕೆ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ ಎಂದರು.

ಮಹಿಳಾ ಸಮಿತಿ ಅಧ್ಯಕ್ಷೆ ಪ್ರೇಮ ಎಲ್ಲೋಜಿ ರಾವ್‌ ಅವರು ಮಾತನಾಡಿ ಕೋಟೆಕಣಿಯಲ್ಲಿ ನಡೆಯುತ್ತಿರುವ ರಾಮ ತಾರಕ ಯಜ್ಞ ವಿಶೇಷ ಸಂದರ್ಭವಾಗಿದೆ. ಕಾರ್ಯಕ್ರಮವನ್ನು ವೈಭವದಿಂದ ಹಾಗೂ ಸಂಭ್ರಮದಿಂದ ಆಚರಿಸುವಂತಾಗಲು ಮಹಿಳೆಯರೆಲ್ಲರೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ವಿನಂತಿಸಿದರು.

ಯಜ್ಞ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್‌ ಕೋಟೆಕಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಯಜ್ಞ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಸೂರ್ಲು ಅವರು ವಂದಿಸಿದರು. ರಾಮತಾರಕ ಯಜ್ಞದಂಗವಾಗಿ ಮಾ.23, 24 ಮತ್ತು 25 ರಂದು ಸಂಪೂರ್ಣ ರಾಮಾಯಣ ಯಕ್ಷಗಾನ ಬಯಲಾಟ ಜರಗಲಿದೆ.

LEAVE A REPLY

Please enter your comment!
Please enter your name here