ಪರ್ಲಡ್ಕ : ಇಲ್ಲಿನ ಬಂಗಾರಡ್ಕದಲ್ಲಿ ನವೀಕೃತಗೊಂಡಿರುವ ಶ್ರೀರಾಮ ಭಜನ ಮಂದಿರದಲ್ಲಿ ಸೀತಾ, ಲಕ್ಷ್ಮಣ ಹನುಮ ಸಮೇತ ಶ್ರೀ ರಾಮ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮಾ. 26ರಂದು ನಡೆಯಿತು. ವೇ| ಮೂ| ಉದಯ ನಾರಾಯಣ ಕಲ್ಲೂರಾಯ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆಯಿತು.
ಬೆಳಗ್ಗೆ ಸ್ವಸ್ತೀ ಪುಣ್ಯಾಹವಾಚನ ದ್ವಾದಶ ನಾಳಿಕೇರ ಗಣಪತಿ ಹವನ, ವಿಶೇಷವಾಗಿ ಶ್ರೀ ರಾಮ ತಾರಕ ಯಾಗ, ಬ್ರಹ್ಮಕಲಶ ಮಂಡಲ ಪೂಜೆ, ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಬಳಿಕ ಸಾಮೂಹಿಕ ಶ್ರೀ ರಾಮ ತಾರಕ ಮಂತ್ರ ಪಠಣ ನಡೆಯಲಿದೆ. ಮಧ್ಯಾಹ್ನ ಕಲ್ಪೋಕ್ತ ಸಹಿತ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ದುರ್ಗಾ ನಮಸ್ಕಾರ ಪೂಜೆ, ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು.