ಬಂಟ್ವಾಳ : ಶ್ರೀ ರಾಮ ನಾಮ ತಾರಕ ಮಂತ್ರ ಜಪಿಸುವುದರಿಂದ ವೇದ ಪಾರಾಯಣ ಮಾಡಿದಷ್ಟೇ ಫಲವಿದೆ. ಮಾನಸಿಕ ಒತ್ತಡದಿಂದ ಮುಕ್ತಿ ದೊರೆಯುವುದು. ಆರೋಗ್ಯ ವೃದ್ಧಿಯಾಗುತ್ತದೆ ಎಂದು ಸಂಸ್ಕಾರ ಭಾರತಿ ಜಿಲ್ಲಾ ಪ್ರಮುಖ ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದರು.
ಅವರು ಶ್ರೀರಾಮ ನಾಮ ಜಪ ಯಜ್ಞ ಸಮಿತಿ ತುಂಬೆ ಆಶ್ರಯದಲ್ಲಿ ನಡೆದ ಶ್ರೀರಾಮ ನಾಮ ತಾರಕ ಯಜ್ಞ ದೀಕ್ಷೆ ನೀಡಿ ಮಾತನಾಡಿದರು.
21 ದಿನ ಒಟ್ಟು 21 ದಿನ ನಿರಂತರ 108 ಬಾರಿ ಶೀರಾಮ ನಾಮ ಜಪವನ್ನು ಮನೆಗಳಲ್ಲಿ, ಶ್ರದ್ಧಾ ಕೇಂದ್ರ, ಭಜನ ಂದಿರಗಳಲ್ಲಿ ಸಾಮೂಹಿಕ ನಡೆಸಲಾಗುವುದು. ಒಂದು ಕೋಟಿ ಜಪ ಮಾಡಲು ಸಂಕಲ್ಪ ಮಾಡಲಾಗಿದೆ. ಎ. 7ರಂದು ಕಲ್ಲಿಗೆ ಗ್ರಾಮದ ಪೆರಿಯೋಡು ಬೀಡು ಬಳಿ ನಡೆಯಲಿರುವ ಶ್ರೀರಾಮ ನಾಮ ತಾರಕ ಜಪ ಯಜ್ಞದಂದು ದೀಕ್ಷಾ ನಿರತ ಎಲ್ಲರೂ ಯಾಗದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘ ಚಾಲಕ ಕೊಡಮಣ್ಣು ಕಾಂತಪ್ಪ ಶೆಟ್ಟಿ , ಜೋತಿಷಿ ಅನಿಲ್ ಪಂಡಿತ್, ಶ್ರೀರಾಮ ನಾಮ ತಾರಕ ಯಜ್ಞ ಸಮಿತಿ ಅಧ್ಯಕ್ಷ ತೇವು ತಾರಾನಾಥ್ ಕೊಟ್ಟಾರಿ, ಸಂಚಾಲಕ ದಾಮೋದರ ನೆತ್ತರಕೆರೆ, ನವೋದಯ ಮಿತ್ರ ವೃಂದ ನೆತ್ತರಕೆರೆ ಅಧ್ಯಕ್ಷ ಸುರೇಶ ಭಂಡಾರಿ ಅರ್ಬಿ, ಪದ್ಮನಾಭ ಶೆಟ್ಟಿ ಪುಂಚಮೆ, ಅರುಣ್ ಕುಮಾರ್ ಶೆಟ್ಟಿ ನುಲಿಯಾಲ್ಗುತ್ತು, ಸುಬ್ರಹ್ಮಣ್ಯ ರಾವ್, ಪಂಚ ಗ್ರಾಮಗಳ ನೂರಾರು ಗಣ್ಯರು ದೀಕ್ಷಾ ಸಂಕಲ್ಪ ಮಾಡಿದರು.