Home ಧಾರ್ಮಿಕ ಸುದ್ದಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ: ಕೊಡಿಮರದ ವಿಜ್ಞಾಪನ ಪತ್ರ ಬಿಡುಗಡೆ

ಶ್ರೀ ರಾಜರಾಜೇಶ್ವರಿ ದೇವಸ್ಥಾನ: ಕೊಡಿಮರದ ವಿಜ್ಞಾಪನ ಪತ್ರ ಬಿಡುಗಡೆ

1936
0
SHARE

ಪೊಳಲಿ: ಜೀರ್ಣೋ ದ್ಧಾರ ಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಧ್ವಜಸ್ತಂಭ (ಕೊಡಿಮರ)ವೂ ನವೀಕರಣಗೊಳ್ಳಲಿದ್ದು, ಇದನ್ನು ಬಿಲ್ಲವ ಸಮಾಜದವರು ಸೇವಾರೂಪವಾಗಿ ನೀಡಲಿದ್ದಾರೆ. ಈ ಕುರಿತು ವಿಜ್ಞಾಪನ ಪತ್ರವನ್ನು ಪೊಳಲಿ ದೇವಸ್ಥಾನದಲ್ಲಿ ಪ್ರಾರ್ಥಿಸಿ ಸರ್ವ ಮಂಗಲ ಕಲ್ಯಾಣ ಮಂಟಪದಲ್ಲಿ ಬಿಡು ಗಡೆಗೊಳಿಸಲಾಯಿತು.

ಕೊಡಿಮರ ನವೀಕರಣದ ಕುರಿತು ಪುರುಷ ಎನ್‌.ಸಾಲ್ಯಾನ್‌ ಮಾಹಿತಿ ನೀಡಿ, ಕ್ಷೇತ್ರದ ವಾಸ್ತು ಶಿಲ್ಪಿ ಮಹೇಶ್‌ ಮುನಿಯಂಗಳ ಅವರ ನಿರ್ದೇ ಶನದಂತೆ ಮರದ ಕೆತ್ತನೆ ಕಾರ್ಯ ಪೂರ್ಣ ಗೊಂಡಿದೆ. ತೈಲಾ ವಾಸ ಮೂಲಕ ಸುಮಾರು 8000 ಲೀ ಶುದ್ದ ಎಳ್ಳೆಣ್ಣೆಯಲ್ಲಿ ಧ್ವಜಸ್ತಂಭವನ್ನು ಇಡಲಾಗಿದೆ. ಕೊಡಿಮರಕ್ಕೆ ತಾಮ್ರಮುಚ್ಚಲು 2000 ಸಾವಿರ ಕೆ.ಜಿ. ತಾಮ್ರ ಹೊದಿಕೆಗೆ ಬೇಕಾಗಿದ್ದು, ಇದಕ್ಕೆ 36 ಲಕ್ಷ ರೂ.ತಗಲಬಹುದು ಎಂದು ಅಂದಾಜಿಸಲಾಗಿದೆ.

ಆಧಾರಶಿಲೆ, ನವರತ್ನ, ದಂಬೆಕಲ್ಲು, ಧ್ವಜಸ್ಥಂಭದ ಪೀಠಕ್ಕೆ ಸುಮಾರು 8 ಲಕ್ಷ ರೂ. ತಗಲಬಹುದು. 5 ಅಡಿ ಎತ್ತರ ಹಾಗೂ 3 ಅಡಿ ಅಗಲದ ನವಿಲಿನ ಉಬ್ಬು ಚಿತ್ರ ಇರುವ ಬೆಳ್ಳಿಯ ಗರುಡ ಧ್ವಜಕ್ಕೆ 18 ಕೆ.ಜಿ.ಯಷ್ಟು ಬೆಳ್ಳಿಗೆ 10 ಲಕ್ಷ ರೂ., ಅಲ್ಲದೆ ಧ್ವಜಸ್ಥಂಭದ ತುದಿಯಲ್ಲಿ ಬೆಳ್ಳಿಯ ನವಿಲಿಗೆ ಚಿನ್ನದ ಲೇಪನ ಕೊಡಲಿದ್ದು, ಇದಕ್ಕೆ ಸುಮಾರು 12 ಲಕ್ಷ ರೂ. ವೆಚ್ಚವಾಗಲಿದೆ. ಒಟ್ಟು ಧ್ವಜಸ್ತಂಭ ನಿರ್ಮಾಣಕ್ಕೆ 1 ಕೋಟಿ ರೂ. ಖರ್ಚು ತಗಲಬಹುದು ಎಂದು ಅಂದಾಜಸಲಾಗಿದೆ ಎಂದರು.

ಚಂದಪ್ಪ ಅಂಚನ್‌ ಮಾತನಾಡಿ, ಸುಮಾರು 66.75 ಅಡಿ ಎತ್ತರದ ಕೊಡಿ ಮರವು ಜಿಲ್ಲೆಯಲ್ಲೆ ಅತೀ ಎತ್ತರದ ಧ್ವಜಸ್ತಂಭವಾಗಿರಲಿದೆ ಎಂದರು. ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ರಾಮದಾಸ್‌ ಕೋಟ್ಯಾನ್‌ ಮಜಿಲಗುತ್ತು, ಅಧ್ಯಕ್ಷ ಸೇಸಪ್ಪ ಕೋಟ್ಯಾನ್‌ ಪಚಿನಡ್ಕ, ಪ್ರ.ಕಾರ್ಯದರ್ಶಿ ಪುರುಷ ಎನ್‌. ಸಾಲ್ಯಾನ್‌, ಚಂದಪ್ಪ ಸಾಲ್ಯಾನ್‌, ಬಳ್ಳಿ ಚಂದ್ರಶೇಖರ ಗೋಪಾ ಲಕೃಷ್ಣ ಕೈಕಂಬ, ಉಮೇಶ್‌ ಪೂಜಾರಿ ಬಾರಿಂಜ, ಜಯಾನಂದ ಅಂಚನ್‌, ನಾರಾಯಣ ಎಂ. ಅಮ್ಮುಂಜೆ, ರಾಜು ಕೋಟ್ಯಾನ್‌, ಯಶವಂತ ಕೋಟ್ಯಾನ್‌, ಭುವನೇಶ್‌ ಪಚಿನಡ್ಕ, ಚಂದಪ್ಪ ಅಂಚನ್‌ ಮಜಿಲಗುತ್ತು, ಉದ್ಯಮಿ ಗಂಗಾಧರ ಪೂಜಾರಿ ಕೊಪ್ಪಲ, ಗಣೇಶ್‌ ಪೂಜಾರಿ, ಮಾ.ತಾ.ಪಂ. ಸದಸ್ಯ ಯಶವಂತ ದೇರಾಜೆ, ಸದಾಶಿವ ಕರ್ಕೇರಾ ಕಾಜಿಲ, ರಾಮಪ್ಪ ಪೂಜಾರಿ, ಪ್ರಶಾಂತ್‌ ವಿಮಲ ಕೋಡಿ, ದೀಪಕ್‌ ಸತೀಶ್ಚಂದ್ರ ಇರುವೈಲ್‌ ಪಾಣಿಲ, ದೇವುದಾಸ್‌ ಅಂಚನ್‌ ಗುರುಪುರ, ಚರಣ್‌ ಬಡಕಬೈಲ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here