Home ಧಾರ್ಮಿಕ ಸುದ್ದಿ ಮಾ. 28ರಿಂದ 30: ಕೇಪು ದೇವಸ್ಥಾನದಲ್ಲಿ ಶ್ರೀ ಪಂಚಮುಖೀ ಆಂಜನೇಯ ಪ್ರತಿಷ್ಠೆ

ಮಾ. 28ರಿಂದ 30: ಕೇಪು ದೇವಸ್ಥಾನದಲ್ಲಿ ಶ್ರೀ ಪಂಚಮುಖೀ ಆಂಜನೇಯ ಪ್ರತಿಷ್ಠೆ

563
0
SHARE
ಕಡಬ : ಕುಟ್ರಾಪ್ಪಾಡಿ ಗ್ರಾಮದ ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀ ಜನಾರ್ದನ ದೇವಸ್ಥಾನದ ವಠಾರದಲ್ಲಿ  ಶಿಲಾಮಯ ಶ್ರೀ ಪಂಚಮುಖೀ ಆಂಜನೇಯ ಸ್ವಾಮಿಯ ಪ್ರತಿಷ್ಠೆ ಹಾಗೂ ಬ್ರಹ್ಮಲಶೋತ್ಸವ ಕಾರ್ಯ ಕ್ರಮವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ  ಮಾ. 28ರಿಂದ 30ರ ತನಕ ವಿಜೃಂಭಣೆಯಿಂದ ಜರಗಲಿದೆ.
ಮಾ. 28ರಂದು ಬೆಳಗ್ಗೆ ವೈದಿಕ ವಿಧಿಗಳು ನೆರವೇರಲಿವೆ. ಬಳಿಕ ಭಕ್ತರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಮಧ್ಯಾಹ್ನ ಶ್ರೀಲಕ್ಷ್ಮೀ ಜನಾರ್ದನ ದೇವರಿಗೆ ವಿಶೇಷ ಮಹಾಪೂಜೆ ಹಾಗೂ ಪವಮಾನಾಭಿಷೇಕ ನಡೆಯಲಿದೆ. ಸಂಜೆ ಕ್ಷೇತ್ರದ ತಂತ್ರಿಗಳು ಹಾಗೂ ಋತ್ವಿಜರನ್ನು ಪೂರ್ಣಕುಂಭ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಗುವುದು. 29ರಂದು ಬೆಳಗ್ಗೆ ಮಹಾಗಣಮತಿ ಹೋಮ ಹಾಗೂ ಸಂಜೆ ವಿವಿಧ ಧಾರ್ಮಿಕ ವಿಧಿಗಳು ಜರಗಲಿವೆ. 30ರಂದು ಪೂರ್ವಾಹ್ನ ಗಂಟೆ 11.12ರ ಮುಹೂರ್ತದಲ್ಲಿ ಶ್ರೀ ಪಂಚಮುಖೀ ಆಂಜನೇಯ ಸ್ವಾಮಿಯ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ರಾತ್ರಿ ಮನೋರಂಜನ ಕಾರ್ಯಕ್ರಮ ನೆರವೇರಲಿದೆ.
ದಕ್ಷಿಣಾಭಿಮುಖವಾಗಿ ಆಂಜನೇಯ ಸ್ವಾಮಿ ದೈವಜ್ಞರ ಸೂಚನೆಯಂತೆ ಶ್ರೀಕ್ಷೇತ್ರದಲ್ಲಿ  ಪಂಚಮುಖೀ ಆಂಜನೇಯ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ.
ವಿಷ್ಣುವಿನ ಸಾನಿಧ್ಯವಾಗಿರುವ ಇಲ್ಲಿ  ಆಕರ್ಷಕ ಗೋಪುರದಲ್ಲಿ ದಕ್ಷಿಣಾಭಿ ಮುಖವಾಗಿ ಆಂಜನೇಯ ಸ್ವಾಮಿಯ ಸಂಪೂರ್ಣ ಶಿಲಾಮಯ ಮೂರ್ತಿಯನ್ನು  ಪ್ರತಿಷ್ಠೆ ಮಾಡಲಾಗುತ್ತಿದ್ದು, ಇದು ಅಪರೂಪದ ಯಾತ್ರಾಸ್ಥಳವಾಗಿ ಕಂಗೊಳಿಸಲಿದೆ. ವಿಷ್ಣು ಸಾನ್ನಿಧ್ಯದಲ್ಲಿ ಈ ರೀತಿ ದಕ್ಷಿಣಾಭಿಮುಖವಾಗಿ ಆಂಜನೇಯ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿರುವುದು ದಕ್ಷಿಣ ಭಾರತದಲ್ಲಿಯೇ ಪ್ರಥಮ ಎನ್ನಲಾಗಿದೆ.
ನಾಳೆ ಮೆರವಣಿಗೆ
ಕಾರ್ಕಳದಿಂದ ಉಪ್ಪಿನಂಗಡಿ ಮಾರ್ಗ ವಾಗಿ ಆಗಮಿಸಲಿರುವ ಶಿಲಾಮಯ ಶ್ರೀ ಆಂಜನೇಯ ಮೂರ್ತಿಯನ್ನು ಮಾ. 22ರಂದು ಕ್ಷೇತ್ರಕ್ಕೆ ಮೆರವಣಿಗೆಯ ಮೂಲಕ ತರಲಾಗುವುದು. ಉಪ್ಪಿನಂಗಡಿಯಿಂದ ವಾಹನ ಜಾಥಾದ ಮೂಲಕ ಆಗಮಿಸುವ ಆಂಜನೇಯ ಮೂರ್ತಿಯನ್ನು ಸಂಜೆ 4 ಗಂಟೆಗೆ ಕಡಬದ ತಹಶೀಲ್ದಾರ್‌ ಕಚೇರಿಯ ಬಳಿ ಎದುರುಗೊಂಡು ಅಲ್ಲಿಂದ ಕಡಬದ ಮುಖ್ಯರಸ್ತೆಯ ಮೂಲಕ ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗದ ಗೊಂಬೆಗಳು, ಪೊಳಲಿ ಹುಲಿವೇಷ, ಕೊಂಬು ಕಹಳೆ, ಚಂಡೆ ಹಾಗೂ ನಾಸಿಕ್‌ ಬ್ಯಾಂಡ್‌ ಒಳಗೊಂಡ ಆಕರ್ಷಕ ಶೋಭಾಯಾತ್ರೆಯಲ್ಲಿ  ಕೇಪು ದೇವಸ್ಥಾನದ ವಠಾರಕ್ಕೆ ತರಲಾಗುವುದು ಎಂದು ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಶಿವರಾಮ ಶೆಟ್ಟಿ ಕೇಪು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here