Home ಧಾರ್ಮಿಕ ಸುದ್ದಿ ಶ್ರೀ ಪಂಚದುರ್ಗಾ ಪರಮೇಶ್ವರೀ ದೇವಿ ಕ್ಷೇತ್ರ ಕಕ್ಯಬೀಡು: ವರ್ಷಾವಧಿ ಜಾತ್ರೆಗೆ ಚಾಲನೆ

ಶ್ರೀ ಪಂಚದುರ್ಗಾ ಪರಮೇಶ್ವರೀ ದೇವಿ ಕ್ಷೇತ್ರ ಕಕ್ಯಬೀಡು: ವರ್ಷಾವಧಿ ಜಾತ್ರೆಗೆ ಚಾಲನೆ

1328
0
SHARE

ಪುಂಜಾಲಕಟ್ಟೆ : ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ಜ. 14 ರಿಂದ 19ರ ವರೆಗೆ ನಡೆಯಲಿರುವ ವರ್ಷಾವಧಿ ಜಾತ್ರೆಗೆ ಸೋಮವಾರ ಚಾಲನೆ ನೀಡಲಾಯಿತು.

ಬೆಳಗ್ಗೆ ಸ್ಥಳ ಶುದ್ಧಿ, ಕಲಶಾಭಿಷೇಕ, ಮಹಾಪೂಜೆ, ಚೆಂಡು, ಧ್ವಜಾರೋಹಣ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಗ್ರಾಮದ ಹಾಗೂ ಪರವೂರ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಶ್ರೀಕ್ಷೇತ್ರ ಧ.ಗ್ರಾ. ಯೋಜನೆ ಉಳಿ ಕಾರ್ಯಕ್ಷೇತ್ರದ ಒಕ್ಕೂಟಗಳ ವತಿಯಿಂದ ಮಜ್ಜಿಗೆ ವಿತರಣೆ ವ್ಯವಸ್ಥೆಗೊಳಿಸಲಾಗಿತ್ತು. ದೇವಳಕ್ಕೆ ಹೂವಿನ ಅಲಂಕಾರ ನvಸಲಾಗಿತ್ತು.

ದೇವಳದ ಜೀರ್ಣೋದ್ಧಾರ ಸಮಿತಿಯ ಸ್ಥಾಪಕಾಧ್ಯಕ್ಷ ಕೆ. ಜಾರಪ್ಪ ಶೆಟ್ಟಿ ಖಂಡಿಗ, ಪ್ರಧಾನ ಅರ್ಚಕ ಶ್ರೀನಿವಾಸ ಅರ್ಮು ಡ್ತಾಯ, ಬಾರ್ದಡ್‌ ಗುತ್ತಿನ ಮನೆಯವರು, ಅಧ್ಯಕ್ಷ ಯು. ದಾಮೋದರ ನಾಯಕ್‌, ಪೂರ್ವಾಧ್ಯಕ್ಷ ಜಯ ಶೆಟ್ಟಿ ಕಿಂಜಾಲು, ಉಪಾಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್‌, ಕಾರ್ಯದರ್ಶಿ ನಾರಾಯಣ ರೈ, ಪದಾಧಿಕಾರಿಗಳಾದ ಅಗ್ಪಲ ಸಂಜೀವ ಗೌಡ, ಪಿ. ರಾಮಯ್ಯ ಭಂಡಾರಿ, ಉತ್ಸವ ಸಮಿತಿ ಅಧ್ಯಕ್ಷ ಪಿ. ವಾಸುದೇವ ಮಯ್ಯ, ಉಪಾಧ್ಯಕ್ಷ ವಿಶ್ವನಾಥ ಸಾಲ್ಯಾನ್‌ ಬಿತ್ತ, ಕಚೇರಿ ವ್ಯವಸ್ಥಾಪಕ ವೀರೇಂದ್ರ ಕುಮಾರ್‌ ಜೈನ್‌, ಉಳಿ ಸೇವಾ ಸಹಕಾರ ಬ್ಯಾಂಕ್‌ ಅಧ್ಯಕ್ಷ ಎ. ಚೆನ್ನಪ್ಪ ಸಾಲ್ಯಾನ್‌, ಕಾರ್ಯ ನಿರ್ವಹಣಾಧಿಕಾರಿ ನಾರಾಯಣ ರೈ, ಗ್ರಾ.ಪಂ. ಉಪಾಧ್ಯಕ್ಷ ಸುರೇಶ್‌ ಮೈರ, ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಐವೆರ್‌ ಫ್ರೆಂಡ್ಸ್‌, ಶಿವಾಜಿ ಫ್ರೆಂಡ್ಸ್‌ ಸದಸ್ಯರು, ಜೀರ್ಣೋದ್ಧಾರ ಸಮಿತಿ, ಉತ್ಸವ ಸಮಿತಿ ಸದಸ್ಯರು, ಶ್ರೀ ಪಂಚದುರ್ಗಾ ಪ್ರೌಢಶಾಲಾ ಮುಖ್ಯ ಶಿಕ್ಷಕ, ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜ. 15ರಂದು ಬೆಳಗ್ಗೆ ಚಂಡಿಕಾಹೋಮ, ಸಂಜೆ 5.30ಕ್ಕೆ ಚೆಂಡು, ರಾತ್ರಿ 10ರಿಂದ ಉತ್ಸವ, ಬಯಲಾಟ ನಡೆಯಲಿದೆ.

LEAVE A REPLY

Please enter your comment!
Please enter your name here