ಬಂಟ್ವಾಳ : ಮೊಗರನಾಡು ಸಾವಿರ ಸೀಮೆಯ ಶ್ರೀ ನಿಟಿಲಾಕ್ಷ ಸದಾಶಿವ ದೇವ ಸ್ಥಾನದ ಶ್ರೀ ದೇವರ ವರ್ಷಾವಧಿ ಜಾತ್ರೆ ಪ್ರಯುಕ್ತ ಬುಧವಾರ ರಾತ್ರಿ ಶ್ರೀ ದೇವರ ನೇತ್ರಾವತಿ ನದಿಯಲ್ಲಿ ಅವಭೃಥ ಸ್ನಾನ, ಮಹಾಪೂಜೆ, ಶ್ರೀ ದೇವರ ಮರುಸವಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಕಲ್ಲಡ್ಕ ಪೇಟೆ, ಕೊಳಕೀರು, ಕಾರಂತಕೋಡಿ ಮೂಲಕ ಶ್ರೀಕ್ಷೇತ್ರಕ್ಕೆ ತಲುಪಿತು.
ಅನಂತರ ಧ್ವಜಾವರೋಹಣ, ಬಟ್ಟಲು ಕಾಣಿಕೆ, ಮಹಾಪೂಜೆ ಜರಗಿದವು. ಬೆಳಗ್ಗೆ ದೇವರ ಕವಾಟೋದ್ಘಾಟನೆ, ತುಲಾಭಾರ ಸೇವೆ ನಡೆದವು. ಮಧ್ಯಾಹ್ನ 12ರಿಂದ ಮಹಾಪೂಜೆ , ಅನಂತರ ಅಪರಾಹ್ನ 4 ರಿಂದ ಅವಭೃಥ ಸವಾರಿಯು ಹೊರಟಿತು.
ವಸಂತಕಟ್ಟೆ ಪೂಜೆ, ಓಕುಳಿಪ್ರಸಾದ, ಅವಭೃತ ಪಡ್ಡಾಯಿಬೈಲು – ಪೂವಳ ಮುಳಿಕೊಡಂಗೆ, ಕಟ್ಟೆಮಾರು, ಬೈದರಡ್ಕ, ಮಾಕಳಿ, ಬಾಳಿಕೆ, ಅಂತರಗುತ್ತು, ಬಸ್ತುಕೋಡಿ, ಬೋಳಂಗಡಿ, ಮೆಲ್ಕಾರು ಆಲಡ್ಕ, ಪಾಣೆಮಂಗಳೂರು ಅವಭೃಥ ಕಟ್ಟೆಪೂಜೆಗಳು ನಡೆದವು.