ಕಾಣಿಯೂರು : ಅಷ್ಟಮಠಗಳಲ್ಲಿ ಒಂದಾದ ಕಾಣಿಯೂರು ಮೂಲ ಮಠದ ಶ್ರೀ ರಾಮತೀರ್ಥ ಮಠದಲ್ಲಿ ಶ್ರೀ ನರಸಿಂಹ ಜಯಂತ್ಯುತ್ಸವ ನಡೆಯಿತು.
ನರಸಿಂಹ ಜಯಂತಿಯ ಅಂಗವಾಗಿ ವಿಷ್ಣುಪ್ರಿಯಾ ಭಜನ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಕಾಣಿಯೂರು ಮಠದ ಸಂಸ್ಥಾನ ದೇವರ ಪೂಜೆ, ಮಹಾಪೂಜೆ ನಡೆದ ಬಳಿಕ ಪುತ್ತೂರು ಬೊಳುವಾರು ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯರಿಂದ “ಮಾಗಧ ವಧೆ’ ಯಕ್ಷಗಾನ ತಾಳಮದ್ದಳೆ ನಡೆಯಿತು.
ಅಪರಾಹ್ನ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ಶ್ರೀಪಾದಂಗಳವರಿಂದ ಫಲ ಮಂತ್ರಾಕ್ಷತೆ ಹಾಗೂ ಅನ್ನಸಂತರ್ಪಣೆ ನಡೆ ಯಿತು. ಮಠದ ವ್ಯವಸ್ಥಾಪಕ ನಿರಂಜನ್ ಆಚಾರ್ ಸ್ವಾಗತಿಸಿ, ವಂದಿಸಿದರು.