ಕೊಣಾಜೆ: ಪಟ್ಟೋರಿ ಶ್ರೀ ನಾಗಬ್ರಹ್ಮ ಭಜನ ಮಂಡಳಿ ಆಶ್ರಯದಲ್ಲಿ ಪಟ್ಟೋರಿಯ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ದುರ್ಗಾಪೂಜೆ ಮತ್ತು 38ನೇ ವರ್ಷದ ಏಕಹಾ ಭಜನೆ ನಡೆಯಿತು. ಶನಿವಾರ ಸೂರ್ಯೋದಯಕ್ಕೆ ನಡೆದ ಏಕಾಹ ಭಜನೆಯ ದೀಪಪ್ರಜ್ವಲನೆಯನ್ನು ಕೊಣಾಜೆ ಬೀಡು ತಿರುಮಲೇಶ್ವರ್ ಭಟ್ ಅವರು ನೆರವೇರಿಸಿದರು.
ರಘುರಾಮ ಕಾಜವ ಪಟ್ಟೋರಿ, ಭಜನ ಮಂಡಳಿ ಅಧ್ಯಕ್ಷ ರಾಧಾಕೃಷ್ಣ ಕಲಾಯಿ, ಕಾರ್ಯದರ್ಶಿ ಮೋಹನ್ ಕಾಟುಕೋಡಿ ಹಾಗೂ ನಾಗಬ್ರಹ್ಮ ಭಜನ ಮಂಡಳಿಯ ಪದಾಧಿಕಾರಿಗಳು ಮೊದಲಾದವರು ಭಾಗ ವಹಿಸಿದ್ದರು.
ಶುಕ್ರವಾರದಂದು ಸಂಜೆ ಬಡಾಜೆಬೀಡು ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಶ್ರೀ ದುರ್ಗಾ ಪೂಜೆಯು ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ನಡೆಯಿತು.