ಸುಳ್ಯ ಫೆ. 24: ಅಜ್ಜಾವರ ಗ್ರಾಮದ ಮೇದಿನಡ್ಕ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶ
ಕುಂಭಾಭಿಷೇಕ ವೇ| ಮೂ| ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಜರಗಿತು. ಪ್ರತಿ ದಿನ ಧಾರ್ಮಿಕ ಸಭಾ
ಕಾರ್ಯಕ್ರಮ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮೂರು ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ
ಸ್ವೀಕರಿಸಿದರು.
ಶ್ರೀ ದೇವರಿಗೆ ಕುಂಭಾಭಿಷೇಕದ ಸಂದರ್ಭ ಕುಂಭದರ್ಶನ, ರಂಗಪೂಜೆ, ಕಟ್ಟೆಪೂಜೆ, ದರ್ಶನ ಬಲಿ, ಹಾಗೂ ವೇದಘೋಷ, ಛತ್ರ ಚಾಮರಗಳು, ಬಿರುದು ಕಟ್ಟಿಗೆ, ರುದ್ರವಾದ್ಯಾದಿ ಅಷ್ಟಾವಧಾನ ಸೇವೆಯೊಂದಿಗೆ ಉತ್ಸವ ನಡೆದು ಬಟ್ಟಲು ಕಾಣಿಕೆ ನಡೆಯಿತು.