ಉಳ್ಳಾಲ : ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ಕೊಲ್ಯ ಜಗದ್ಗುರು ಶ್ರೀ ರಮಾನಂದ ಸ್ವಾಮೀಜಿ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಬಿ. ಗೋಪಾಲಕೃಷ್ಣ ಶೆಟ್ಟಿ ಅಡ್ಕ ಹೊಸಮನೆ ಉದ್ಘಾಟಿಸಿದರು. ಹಿಂದೂ ಜಾಗೃತಿ ಸಮಿತಿ ವಕ್ತಾರ ಚಂದ್ರ ಮೊಗೇರ ಧಾರ್ಮಿಕ ಭಾಷಣ ಮಾಡಿದರು. ಮಾಜಿ ಶಾಸಕ ಕುತ್ತಾರುಗುತ್ತು ಜಯರಾಮ ಶೆಟ್ಟಿ, ನ್ಯಾಯವಾದಿ ರಮೇಶ್ ಕಾಂಞಿಗಾಡು ಮುಖ್ಯ ಅತಿಥಿಗಳಾಗಿದ್ದರು. ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಮಾತನಾಡಿದರು.
ಕರಾಟೆಯಲ್ಲಿ ಚಿನ್ನದ ಪದಕ ವಿಜೇತ ಸಂಯಕ್ ರೈ, ಸಮಾಜಸೇವಕ ರೋಹಿತ್ ಬಂಗೇರ ತಲಪಾಡಿ, ಧಾರ್ಮಿಕ ಸೇವಾ ಧುರೀಣ ಮೋಹನ್ ಗೋರಿಗುಡ್ಡ ಅವರನ್ನು ಗೌರವಿಸಲಾಯಿತು. ಶ್ರೀ ರಮಾನಂದಾಶ್ರಮ ಮಾತೃ ಮಂಡಳಿ ಅಧ್ಯಕ್ಷೆ ಮೀನಾ ಬಾಲಕೃಷ್ಣ ಉಪಸ್ಥಿತರಿದ್ದರು.
ಬಳಿಕ ಪ್ರತಿಭಾ ಪುರಸ್ಕಾರ, ಶ್ರೀ ರಮಾನಂದಾಶ್ರಮ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಬಿ. ನಾರಾಯಣ ಕುಂಪಲ ಸ್ವಾಗತಿಸಿದರು. ಟ್ರಸ್ಟಿ ಶಿವಾನಂದ ಮೆಂಡನ್ ವಂದಿಸಿದರು. ವಿದ್ಯಾಧರ್ ಶೆಟ್ಟಿ ನಿರೂಪಿಸಿದರು.