ಮಹಾನಗರ: ಉರ್ವ- ಬೋಳೂರಿನ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಾವಧಿ ಮಹಾ ಪೂಜೆಯ ಪೂರ್ವಭಾವಿಯಾಗಿ ನಡೆಯ ಲಿರುವ 48 ದಿನಗಳ ಲಲಿತ ಸಹಸ್ರನಾಮ ಪಾರಾಯಣ ಮತ್ತು ಸಂಧ್ಯಾ ಭಜನೆ ನಾಮ ಸಂಕೀರ್ತನೆಯನ್ನು ನ್ಯಾಯವಾದಿ ಕೆ. ಮಹಾಬಲ ಶೆಟ್ಟಿ ಉದ್ಘಾಟಿಸಿದರು. ಉದ್ಯಮಿ ಮಧುಸೂದನ್ ಆಯರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಹರಿಶ್ಚಂದ್ರ ಕರ್ಕೇರ ಬೈಕಂಪಾಡಿ, ಮೊಕ್ತೇಸರರಾದ ಯಾದವ ಸುವರ್ಣ ಕುದ್ರೋಳಿ, ಯಾದವ ಸಾಲ್ಯಾನ್ ಕುದ್ರೋಳಿ, ದೇವಾನಂದ ಗುರಿಕಾರ ಬೋಳೂರು, ಮಾಧವ ಸಾಲ್ಯಾನ್ ಬೋಳೂರು, ಕೇಶವ ಗುರಿಕಾರ ತಣ್ಣೀರುಬಾವಿ, ಸುಂದರ ಗುರಿಕಾರ ಕೂಳೂರು, 7 ಪಟ್ಣ ಮೊಗವೀರ ಸಂಯುಕ್ತ ಸಭೆ ಅಧ್ಯಕ್ಷ ಯಶವಂತ್ ಪಿ. ಮೆಂಡನ್ ಮತ್ತು ಶ್ರೀ ಕ್ಷೇತ್ರದ ಲಲಿತ ಸಹಸ್ರನಾಮ ಪಾರಾ ಯಣದ ಮಹಿಳೆಯರು, ವಿವಿಧ ಭಜನ ಮಂಡಳಿಯ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಯಶವಂತ ಪಿ. ಮೆಂಡನ್ ಸ್ವಾಗತಿಸಿ, ಗೌತಮ್ ಕೋಡಿಕಲ್ ನಿರೂಪಿಸಿದರು. ಸುಭಾಷ್ ಕುಂದರ್ ವಂದಿಸಿದರು.