ಮಂಡೆಕೋಲು: ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ ವೇ|ಮೂ| ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಅವರ ನೇತೃತ್ವದಲ್ಲಿ ನಡೆಯಿತು.
ಮಂಗಳವಾರ ಉಗ್ರಾಣ ತುಂಬಿಸುವುದು, ಸತ್ಯನಾರಾಯಣ ಪೂಜೆ, ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮ, ಶ್ರೀ ಉಳ್ಳಾಕುಲು ಮೂಲಸ್ಥಾನ ಕಳೇರಿಯಿಂದ ಭಂಡಾರ ತರುವುದು, ರಾತ್ರಿ ಭೂತ ಬಲಿ ಉತ್ಸವ, ಬಲಿ ಕಟ್ಟೆ ಪೂಜೆ, ವಸಂತೋತ್ಸವ, ಬೆಡಿ ಉತ್ಸವ, ಹಾಗೂ ನೃತ್ಯ ಬಲಿ ಉತ್ಸವ ನಡೆಯಿತು.ಗುರುವಾರ ದೇವರ ದರ್ಶನ ಬಲಿ ಉತ್ಸವ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, ದುರ್ಗಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಸದಸ್ಯರಾದ ಸುಂದರ ಗೌಡ ಮೀನಗದ್ದೆ, ಬಿ. ಮೇದಪ್ಪ ಗೌಡ, ಪಿ. ಹೊನ್ನಪ್ಪ ಗೌಡ, ಶಿವಪ್ರಸಾದ್ ಕೆ., ದಿವಾಕರ ಕೆ., ಲೀಲಾವತಿ ಕೇನಾಜೆ, ಪುಷ್ಪಾವತಿ ತಿಮ್ಮಪ್ಪ ಗೌಡ, ಅರ್ಚಕ ರಾಮಕೃಷ್ಣ ಪಾಂಗಣ್ಣಾಯ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಟಾರ್ ಮತ್ತು ಸದಸ್ಯರು, ಮಹಿಳಾ ಸಮಿತಿ ಸದಸ್ಯರು, ಕಳೇರಿ ಉಳ್ಳಾಕುಲು ಧರ್ಮದೈವ ಮತ್ತು ಪರಿವಾರ ದೈವಗಳ ದೇವಸ್ಥಾನದ ಅಧ್ಯಕ್ಷ ಜನಾರ್ದನ ಬರೆಮೇಲು ಮತ್ತು ಸರ್ವ ಸದಸ್ಯರು, ಕಳೇರಿ ಸಮಿತಿ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ ಮತ್ತು ಸದಸ್ಯರು, ಪುಂಡರೀಕ ಹೆಬ್ಟಾರ್ ಉಪಸ್ಥಿತರಿದ್ದರು. ನೂರಾರು ಭಕ್ತರು ಆಗಮಿಸಿ ಅನ್ನ ಪ್ರಸಾದ ಸ್ವೀಕರಿಸಿದರು.