ನಗರ: ಮಹತೋಭಾರ ಶ್ರೀ ಮಹಾ ಲಿಂಗೇಶ್ವರ ದೇವಾಲಯದಲ್ಲಿ ಜಾತ್ರೆಯ ಅಂಗವಾಗಿ ಗುರುವಾರ ಶ್ರೀ ದೇವರ ಎದುರು ತುಲಾಭಾರ ಸೇವೆ ನಡೆಯಿತು. ವರ್ಷ
ದಲ್ಲಿ ಒಂದು ದಿನ ಮಾತ್ರ ಬ್ರಹ್ಮರಥೋತ್ಸವದ ಮರುದಿನ ತುಲಾಭಾರ ಸೇವೆ ನಡೆಯುತ್ತದೆ.
ಪುತ್ತೂರು ಸೀಮೆಯ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥಿಸಿ ತಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ವಿ ಯಾದ ಹರಕೆ ಹೊತ್ತ ಭಕ್ತರು ತುಲಾಭಾರ ಸೇವೆ ಮಾಡಿ
ಸುತ್ತಾರೆ. ಅಕ್ಕಿ, ತೆಂಗಿನ ಕಾಯಿ, ಸಕ್ಕರೆ, ಬಾಳೆಗೊನೆ, ಸೀಯಾಳ, ತುಪ್ಪ, ಎಣ್ಣೆ ಮೊದಲಾದವುಗಳ ತುಲಾಭಾರ ಸೇವೆ ನಡೆಯುತ್ತದೆ.
83 ತುಲಾಭಾರ ಸೇವೆ ಈ ಬಾರಿ 83 ತುಲಾಭಾರ ಸೇವೆ ನಡೆದಿದೆ. 2015 ನೇ ವರ್ಷದ ಜಾತ್ರೆಯ ಸಂದರ್ಭದಲ್ಲಿ 68 ಸೇವೆ, 2016 ನೇ ಸಾಲಿನಲ್ಲಿ 89 ಸೇವೆ
, 2017 ರಲ್ಲಿ 85 ಸೇವೆ, 2018 ರಲ್ಲಿ 108 ಮಂದಿ ತುಲಾಭಾರ ಸೇವೆ ನಡೆಸಿದ್ದರು.
ತುಲಾಭಾರ ಸೇವಾಕರ್ತರಿಗೆ ಶ್ರೀ ದೇವರಿಗೆ ತೊಡಿಸಲಾಗಿದ್ದ ಮಾಲೆಗಳನ್ನು ಹಾಕಿಸಿ ದೇವಸ್ಥಾನದ ಒಳಾಂಗಣದಲ್ಲಿ ವಾದ್ಯದೊಂದಿಗೆ ಒಂದು ಸುತ್ತು ಬಂದು ಬಳಿಕ ತುಲಾಭಾರ
ಸೇವೆ ನಡೆಸಲಾಯಿತು.