Home Uncategorized ಶ್ರೀ ಮಹಾಲಿಂಗೇಶ್ವರ ದೇಗುಲ: ಸೀಯಾಳಾಭಿಷೇಕ

ಶ್ರೀ ಮಹಾಲಿಂಗೇಶ್ವರ ದೇಗುಲ: ಸೀಯಾಳಾಭಿಷೇಕ

1562
0
SHARE

ನಗರ : ಲೋಕ ಕಲ್ಯಾಣಾರ್ಥವಾಗಿ ಮತ್ತು ವರುಣನ ಕೃಪೆಗಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಶ್ರೀ ದೇವರಿಗೆ ಸೀಯಾಳಾಭಿಷೇಕವನ್ನು ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ದೇವಾಲಯ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ವರ್ಷಂಪ್ರತಿಯಂತೆ ನಡೆದ ಈ ವಿಶೇಷ ಅಭಿಷೇಕಕ್ಕಾಗಿ ನೂರಾರು ಮಂದಿ ಭಕ್ತರು ಸೀಯಾಳವನ್ನು ದೇವಾಲಯಕ್ಕೆ ಒಪ್ಪಿಸಿದರು. ದೇವರ ಗರ್ಭಗುಡಿಯ ಎದುರು ಸಮಿತಿ ಗೌರವಾಧ್ಯಕ್ಷ ಡಾ| ಎಂ.ಕೆ. ಪ್ರಸಾದ್‌ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಸಮಿತಿ ಗೌರವಾಧ್ಯಕ್ಷ ಡಾ| ಎಂ.ಕೆ. ಪ್ರಸಾದ್‌, ಅಧ್ಯಕ್ಷ ಶಶಾಂಕ್‌ ಕೋಟೆಚಾ, ಕಾರ್ಯಾಧ್ಯಕ್ಷ ಅರುಣ್‌ ಕುಮಾರ್‌ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌, ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here