Home ಧಾರ್ಮಿಕ ಸುದ್ದಿ ಶ್ರೀಕ್ಷೇತ್ರ ಹೊಳೆ ಶಂಕರನಾರಾಯಣದಲ್ಲಿ ಎಳ್ಳಮಾವಾಸ್ಯೆ ಸಂಭ್ರಮ

ಶ್ರೀಕ್ಷೇತ್ರ ಹೊಳೆ ಶಂಕರನಾರಾಯಣದಲ್ಲಿ ಎಳ್ಳಮಾವಾಸ್ಯೆ ಸಂಭ್ರಮ

1542
0
SHARE

ಸಿದ್ದಾಪುರ: ನಾಡೋಜ ಡಾ| ಜಿ. ಶಂಕರ ಅವರಿಂದ ಪುನರ್‌ ನಿರ್ಮಾಣಗೊಂಡ ಸಿದ್ದಾಪುರ ಸಮೀಪದ ಶ್ರೀ ಕ್ಷೇತ್ರ ಹೊಳೆ ಶಂಕರನಾರಾಯಣದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜ. 5ರ ಶನಿವಾರದಂದು ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವವು ಜರಗಲಿದೆ.

ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬೆಳಗ್ಗೆ 7ರಿಂದ ಪೂರ್ವಾಹ್ನ 12ರ ತನಕ ಲಘ ಉಪಹಾರ ಮತ್ತು ಪುಟ್ಟರಾಜು ಭಜನೆ ಮಂಡಳಿ ಹಾವೇರಿ ಅವರಿಂದ ಭಜನಾ ಗಾನ ಸುಧೆ ಕಾರ್ಯಕ್ರಮ, ಅನಂತರ ಮಹಾ ಮಂಗಳಾರತಿ, 12.30ರಿಂದ ಅನ್ನ ಸಂತರ್ಪಣೆ, ರಾತ್ರಿ ರಂಗಪೂಜೆ, ಭಜನೆ ಸೇವಾ ಕಾರ್ಯಗಳು ಜರಗಲಿದೆ.

ಕುಂದಾಪುರ ತಾಲೂಕಿನ ಸಿದ್ದಾಪುರ ಸಮಿಪದ ಶ್ರೀ ಕ್ಷೇತ್ರ ಹೊಳೆಶಂಕರನಾರಾಯಣ ಕ್ಷೇತ್ರವು ನಾಡೋಜ ಡಾ| ಜಿ. ಶಂಕರ ಅವರಿಂದ ಪುನಃ ನಿರ್ಮಾಣಗೊಂಡ ಕ್ಷೇತ್ರ.
ಈ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿಯ ಕಾರ್ಯಗಳು ನಡೆದಿವೆ. ಇನ್ನೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈ ಕ್ಷೇತ್ರವು ಪುರಾಣ ಪ್ರಸಿದ್ಧ ಕ್ಷೇತ್ರವೂ ಹಾಗೂ ಪಂಚ ಶಂಕರನಾರಾಯಣ ಕ್ಷೇತ್ರಗಳಲ್ಲೊಂದಾದ ಕ್ಷೇತ್ರವಾಗಿದೆ. ಈ ಕ್ಷೇತ್ರದ ಬಲಭಾಗದಲ್ಲಿ ಮೈತುಂಬಿ ಹರಿಯುವ ವಾರಾಹಿ ನದಿ. ವಾರಾಹಿ ನದಿಯ ಮಧ್ಯೆ ಶುಕ್ತಿಮತಿ ತೀರ್ಥ.

ಅಭಿವೃದ್ಧಿ ಕಾರ್ಯಗಳು ನಾಡೋಜ ಡಾ| ಜಿ. ಶಂಕರ ಅವರಿಂದ ಈ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿಯ ಕಾರ್ಯಗಳು ನಡೆದಿವೆ. ಕ್ಷೇತ್ರದ ಜೀಣೋದ್ಧಾರದೊಂದಿಗೆ ಸಹ
ಪರಿವಾರ ದೈವಸ್ಥಾನಗಳ ಅಭಿವೃದ್ಧಿ ಕಾರ್ಯಗಳು ಕೂಡ ನಡೆದಿವೆ. ಈ ಅಭಿವೃದ್ಧಿ ಕಾರ್ಯದಲ್ಲಿ ಕ್ಷೇತ್ರಕ್ಕೆ ಮತ್ತೂಂದು ಮುಕುಟವೆಂಬಂತೆ ಭವ್ಯವಾಗಿ ಉಮಾರಮಾ ಸಭಾಗೃಹವು ನಿರ್ಮಾಣಗೊಂಡಿದೆ. ಇಲ್ಲಿ ನೂತನವಾಗಿ ನಿರ್ಮಾಣಗೊಂಡ ಉಮಾರಮಾ ಸಭಾಗೃಹವು ಸುಮಾರು 250 ಆಸನಗಳ ವ್ಯವಸ್ಥೆಯ ಸಭಾಗೃಹವಾಗಿದೆ.

ಈ ಸಭಾಗೃಹವು ಎಲ್ಲಾ ಸುಸಜ್ಜಿತ ಸಭಾಗೃಹದಂತೆ ಸಂಪೂರ್ಣವಾದ ವ್ಯವಸ್ಥೆಯನ್ನು ಹೊಂದಿದೆ. ಸುಸಜ್ಜಿತವಾದ ಅಡುಗೆ ಮನೆ. ಪ್ರಕೃತಿಯ ಮಧ್ಯೆ ವಿಶಾಲವಾದ ಪಾರ್ಕಿಂಗ್‌ ವ್ಯಾವಸ್ಥೆ. ಸುಸಜ್ಜಿತವಾದ ಸೌಚಾಲಯಗಳನ್ನು ಒಳಗೊಂಡಿದೆ. ಇಲ್ಲಿ ಮದುವೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರಗುತ್ತಿವೆ. ತೀರ್ಥಸ್ನಾನ ಮಾಡುವ ಸ್ನಾನಘಟ್ಟದ ಕಾಮಗಾರಿ ಅಂತಿಮ ಹಂತದಲ್ಲಿದೆ.

ಕ್ಷೇತ್ರದಲ್ಲಿನ ಉತ್ಸವಗಳು ಪ್ರತಿದಿನದ ಪೂಜೆಯೊಂದಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಪ್ರತಿ ಸಂಕ್ರಮಣದಂದು ಭಕ್ತಾದಿಗಳಿಂದ ಪೂರ್ವಾಹ್ನ 11.30ಕ್ಕೆ ಕಲಹೋಮ, ಕಲಶಾಭಿಷೇಕ, ಮಹಾ ಮಂಗಳಾರತಿ, ಅಪರಾಹ್ನ 12.30ರಿಂದ ಅನ್ನ ಸಂತರ್ಪಣೆ, ರಾತ್ರಿ ರಂಗಪೂಜೆ, ಭಜನಾ ಸೇವೆ ಜರಗುವುದು. ಅಲ್ಲದೆ ಪ್ರತಿ ಸಂಕಷ್ಟಿ ಚೌತಿಯಂದು ಭಕ್ತರಿಂದ 12 ಕಾಯಿ ಗಣಹೋಮ, ಎಳ್ಳಮಾವಾಸ್ಯೆ, ಮಹಾಶಿವರಾತ್ರಿ, ಅಕ್ಷಯ ತೃತೀಯ ದಿನ ವರ್ಧಂತ್ಯುತ್ಸವಗಳು ಜರಗುವುದು.

ವಿಶೇಷ ದಿನ ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 7.30ರಿಂದ 11ರ ತನಕ, ಅಪರಾಹ್ನ 4ರಿಂದ 7ರ ತನಕ, ಸೋಮವಾರದಂದು ಬೆಳಿಗ್ಗೆ 7.30ರಿಂದ 1ರ ವೆರೆಗೆ, ಸಂಜೆ
4ರಿಂದ 7ರ ವರೆಗೆ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ನಡೆಯುತ್ತವೆ.

LEAVE A REPLY

Please enter your comment!
Please enter your name here