ವಿಟ್ಲ : ವಿಟ್ಲ ಕ್ಷೇತ್ರ ಬಾಲಗೋಕುಲ ಸಮಿತಿ ವತಿಯಿಂದ ಆಯೋಜಿಸಿದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಅಂಗವಾಗಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಆರಂಭ ವಾದ ಶೋಭಾಯಾತ್ರೆಯನ್ನು ನ್ಯಾಯವಾದಿ ಶಿವಾನಂದ ಅವರು ಬಾಲಗೋಕುಲ ಸಮಿತಿ ಅಧ್ಯಕ್ಷ ಜಗದೀಶ ಪಾಣೆಮಜಲು ಅವರಿಗೆ ಭಗವಾಧ್ವಜ ಹಸ್ತಾಂತರಿಸಿ ಉದ್ಘಾಟಿಸಿದರು.
ವಿಟ್ಲ ಪ.ಪಂ. ಅಧ್ಯಕ್ಷ ಅರುಣ್ ಎಂ. ವಿಟ್ಲ, ಪ.ಪಂ. ಸದಸ್ಯರು, ಮೈತ್ರೇಯೀ ಗುರುಕುಲದ ವ್ಯವಸ್ಥಾಪಕ ಜಗನ್ನಾಥ ಕಾಸರಗೋಡು, ಬಾಲಗೋಕುಲ ಸಮಿತಿ ಪ್ರ. ಕಾರ್ಯದರ್ಶಿ ಪದ್ಮನಾಭ ಕಟ್ಟೆ, ವಿಟ್ಲ ಆರ್.ಕೆ. ಆರ್ಟ್ಸ್ ನಿರ್ದೇಶಕ ರಾಜೇಶ್ ವಿಟ್ಲ, ನಾಗೇಶ್ ಬಸವನಗುಡಿ ಮತ್ತಿತರರಿದ್ದರು.