Home ಧಾರ್ಮಿಕ ಸುದ್ದಿ ಶ್ರೀಕೃಷ್ಣ ಮಠ : ಪೌಳಿಗೆ ಹೊಸ ಗ್ರಾನೈಟ್‌ ಹಾಸು

ಶ್ರೀಕೃಷ್ಣ ಮಠ : ಪೌಳಿಗೆ ಹೊಸ ಗ್ರಾನೈಟ್‌ ಹಾಸು

270
0
SHARE

ಉಡುಪಿ: ಶ್ರೀಕೃಷ್ಣಮಠದ ಗರ್ಭಗುಡಿಯ ಹೊರಗಿನ ಪ್ರಾಕಾರದಲ್ಲಿರುವ ಚಂದ್ರಶಾಲೆಯನ್ನು ನವೀಕರಿಸಲಾಗಿದೆ. ಜನರ ನೂಕುನುಗ್ಗಲು ಇರುವಾಗ ಸ್ಥಳಾಭಾವ ಉಂಟಾಗುವುದನ್ನು ಮನಗಂಡು ಇದನ್ನು ದುರಸ್ತಿಪಡಿಸಲಾಗಿದೆ. ಒಳಸುತ್ತಿನಲ್ಲಿ ಒಳಗೆ ಹೋಗುವಾಗ ಎಡಕ್ಕೆ ನಿತ್ಯ ನಡೆಯುವ ಅನುಯಾಗದ ಗುಡಿ ಇದೆ. ಅಲ್ಲಿಂದ ಗರುಡ ದೇವರ ಗುಡಿಯವರೆಗೆ ಎರಡೂವರೆ ಅಡಿ ಅಗಲ, 20 ಅಡಿ ಉದ್ದದ ಜಗುಲಿಯನ್ನು ಈಗ ತೆಗೆದು ಹಾಕಲಾಗಿದೆ. ಅಲ್ಲಿಯೇ ಮೇಲ್ಭಾಗ ಓಲಗದವರು ಕುಳಿತುಕೊಳ್ಳುವ ಚಂದ್ರಶಾಲೆಯ ಅಡಿ ಭಾಗ ಟೊಳ್ಳು ಆಗಿರುವುದರಿಂದ ಇದನ್ನು ಹೊಸ ಗ್ರಾನೈಟ್‌ ಹಾಕಿ ದುರಸ್ತಿಪಡಿಸಲಾಗಿದೆ. ಜಗುಲಿಯನ್ನು ತೆಗೆದುಹಾಕಿದ ಕಾರಣ ಭಕ್ತರು ಇನ್ನಷ್ಟು ಹೆಚ್ಚು ಸಂಖ್ಯೆಯಲ್ಲಿ ನಿಲ್ಲಲು ಅವಕಾಶವಾಗಿದೆ.

LEAVE A REPLY

Please enter your comment!
Please enter your name here