Home ಧಾರ್ಮಿಕ ಸುದ್ದಿ ಶ್ರೀ ಕೊರಗ ತನಿಯ, ಸಹಪರಿವಾರ ದೈವಗಳ ನೇಮ

ಶ್ರೀ ಕೊರಗ ತನಿಯ, ಸಹಪರಿವಾರ ದೈವಗಳ ನೇಮ

3354
0
SHARE

ಸುಳ್ಯ : ಅಮರಮುಟ್ನೂರು ಗ್ರಾಮದ ಮೈರಾಳ ಸ್ವಾಮಿ ಶ್ರೀ ಕೊರಗ ತನಿಯ ದೈವಸ್ಥಾನದಲ್ಲಿ ಎರಡನೇ ವರ್ಷದ ಶ್ರೀ ಕೊರಗ ತನಿಯ ಮತ್ತು ಸಹ ಪರಿವಾರ ದೈವಗಳ ನೇಮ ನಡೆಯಿತು.

ಪೂರ್ವಾಹ್ನ ಗಣಪತಿ ಹವನ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದು ಮಂತ್ರವಾದಿ ಗುಳಿಗನ ನೇಮ ನಡೆಯಿತು. ರಾತ್ರಿ ನಾಗಶ್ರೀ ಭಜನ ಮಂಡಳಿ ದಾಸನಕಜೆ ಇವರಿಂದ ಭಜನ ಕಾರ್ಯಕ್ರಮ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆದು ಶ್ರೀ ಕಲ್ಲುರ್ಟಿ ಹಾಗೂ ಮೈಯೋನಿ¤ ದೈವದ ನೇಮ ನಡೆಯಿತು.

ರಾತ್ರಿ ಕೊರಗ ತನಿಯ ದೈವದ ನೇಮ ನಡೆದು, ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಗೌರವಾಧ್ಯಕ್ಷ ಎಸ್‌.ಅಂಗಾರ, ಅಧ್ಯಕ್ಷ ಕೇಶವ ಕಕ್ಕೆಬೆಟ್ಟು, ಕ್ಷೇತ್ರ ಧರ್ಮದರ್ಶಿ ಎಸ್‌. ಗುರುವ, ಉಪಾಧ್ಯಕ್ಷ ವಸಂತ, ಕಾರ್ಯದರ್ಶಿ ಮಾಧವ ಕಲ್ಮಲೆ, ಜತೆ ಕಾರ್ಯದರ್ಶಿ ಭಾನುಪ್ರಕಾಶ್‌ ಪೆಲತಡ್ಕ, ಕೋಶಾಧಿಕಾರಿ ವಿಶ್ವನಾಥ ಮೈರಾಳ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here