Home ಧಾರ್ಮಿಕ ಸುದ್ದಿ ಶ್ರೀ ಕೋಡ್ದಬ್ಬು ದೈವಸ್ಥಾನ: ಧಾರ್ಮಿಕ ಸಭೆ

ಶ್ರೀ ಕೋಡ್ದಬ್ಬು ದೈವಸ್ಥಾನ: ಧಾರ್ಮಿಕ ಸಭೆ

748
0
SHARE

ಕೃಷ್ಣಾಪುರ: ಪಣಂಬೂರು ಶ್ರೀ ಕೋಡ್ದಬ್ಬು ದೈವಸ್ಥಾನ 5ನೇ ಬ್ಲಾಕ್‌ ಕೃಷ್ಣಾಪುರ ಶ್ರೀ ನಾಗದೇವರ ವರ್ಧಂ ತ್ಯುತ್ಸವದ ಅಂಗವಾಗಿ ಶ್ರೀಕೃಷ್ಣ ಯುವಕ ವೃಂದ ಕೃಷ್ಣಾಪುರ ಇದರ ವತಿಯಿಂದ ಸಾಂಸ್ಕೃತಿಕ ಜಾನಪದ ನೃತ್ಯ ರೂಪಕ ಮತ್ತು ಧಾರ್ಮಿಕ ಸಭೆ ಜರಗಿತು. ಪಣಂಬೂರು ಕೋಡ್ದಬ್ಬು ದೈವಸ್ಥಾನದ ಗೌರವಾಧ್ಯಕ್ಷ ಮಂಜುಕಾವ (ಪಿ.ಟಿ. ರೈ) ಅಧ್ಯಕ್ಷತೆ ವಹಿಸಿದ್ದರು. ಐ. ರಮಾನಂದ ಭಟ್ ಉದ್ಘಾಟಿಸಿ ಶುಭಹಾರೈಸಿದರು.

ಅನಾರೋಗ್ಯದಿಂದಿರುವ ಅಬ್ದುಲ್‌ ರಹೀಂ ಅವರಿಗೆ ಶ್ರೀ ಕೃಷ್ಣ ಯುವಕ ವೃಂದದ ವತಿಯಿಂದ ಆರ್ಥಿಕ ಧನ ಸಹಾಯವನ್ನು ನೀಡಲಾಯಿತು. ಅತಿಥಿ ಗಳಾಗಿ ಶಾಸಕ ಡಾ| ವೈ. ಭರತ್‌ ಶೆಟ್ಟಿ, ಕೆ.ಸಿ. ನಾಗೇಂದ್ರ ಭಾರದ್ವಾಜ್‌, ಮಹೇಶ್‌ ಮೂರ್ತಿ ಸುರತ್ಕಲ್‌, ತಿಲಕ್‌ರಾಜ್‌ ಕೃಷ್ಣಾಪುರ, ಮನೋಜ್‌ ಕೋಡಿಕೆರೆ, ಧರ್ಮೇಂದ್ರ ಕೈಕಂಬ, ಮಹಾಬಲ ರೈ, ದೇವರಾಜ್‌ ಎಸ್‌. ಶೆಟ್ಟಿ, ಪ್ರಶಾಂತ್‌ ಮೂಡಾಯಿಕೋಡಿ, ರಮಾನಾಥ್‌ ಶೆಟ್ಟಿ, ಸೇಸಪ್ಪ, ಸುಂದರ್‌ ಬಂಗೇರ, ವಸಂತ್‌ ಕೋಟ್ಯಾನ್‌, ವಿಶ್ವನಾಥ್‌ ಸಾಲ್ಯಾನ್‌ ಉಪ ಸ್ಥಿತರಿದ್ದರು. ಸಭಾ ಕಾರ್ಯಕ್ರಮವನ್ನು ರೋಹಿತ್‌ ಉಳ್ಳಾಲ್‌ ನಿರೂಪಿಸಿದರು. ಮನೋರಂಜನ ಕಾರ್ಯಕ್ರಮದ ಅಂಗವಾಗಿ ಕಿನ್ನಿಗೋಳಿ ವಿಜಯ ಕಲಾವಿದರಿಂದ ‘ಬಿಲೆ ಕಟ್ಟರೆ ಆವಂದಿನ’ ಹಾಸ್ಯ ಪ್ರಧಾನ ನಾಟಕ ನಡೆಯಿತು.

LEAVE A REPLY

Please enter your comment!
Please enter your name here