Home ಧಾರ್ಮಿಕ ಸುದ್ದಿ ಶ್ರೀ ಕಾರಿಂಜೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಪನ್ನ

ಶ್ರೀ ಕಾರಿಂಜೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಪನ್ನ

740
0
SHARE
ರಥೋತ್ಸವ ನಡೆಯಿತು.

ಪುಂಜಾಲಕಟ್ಟೆ: ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ರಥೋತ್ಸವದೊಂದಿಗೆ ಅಷ್ಠಬಂಧ ಬ್ರಹ್ಮಕಲಶೋತ್ಸವವು ಸಂಪನ್ನಗೊಂಡಿತು.

ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿ ಹಾಗೂ ಪ್ರಧಾನ ಅರ್ಚಕ ವೇ| ಮೂ| ನಟರಾಜ ಉಪಾಧ್ಯಾಯ ಅವರ ಸಹಕಾರದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದವು. ರಾತ್ರಿ ಶ್ರೀ ಪಾರ್ವತಿ ಮತ್ತು ಶ್ರೀ ಈಶ್ವರ ದೇವರಿಗೆ ರಂಗಪೂಜೆ, ಕಟ್ಟೆ ಪೂಜೆ, ದೈವಗಳಿಗೆ ಗಗ್ಗರ ಸೇವೆ ನಡೆಯಿತು.

ಸಾವಿರಾರು ಭಕ್ತರು ಶ್ರೀ ಪಾರ್ವತಿ ಸನ್ನಿಧಿ ಹಾಗೂ ಕಾರಿಂಜ ಬೆಟ್ಟದ ಮೇಲಕ್ಕೆ ತೆರಳಿ ಶ್ರೀ ಕಾರಿಂಜೇಶ್ವರ ದೇವರ ಬ್ರಹ್ಮಕಲಶೋತ್ಸವದಲ್ಲಿ ಭಾಗಿಗಳಾಗಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ದೇವಸ್ಥಾನದ ವಠಾರ, ಸಭಾಂಗಣ, ಅನ್ನ ಸಂತರ್ಪಣೆ ಹೀಗೆ ಎಲ್ಲೆಡೆಯಲ್ಲಿ ಸ್ವತ್ಛತೆಗೆ ಮಹತ್ವ ನೀಡಿದ್ದು, ನೂರಾರು ಮಹಿಳೆಯರ ಸಹಿತ ಸ್ವಯಂ ಸೇವಕರ ತಂಡ ಸ್ವಚ್ಛತೆಯಲ್ಲಿ ಪಾಲ್ಗೊಂಡಿತ್ತು. ಪ್ರತಿದಿನದ ಅನ್ನಸಂತರ್ಪಣೆಗೆ ಅಗತ್ಯವಾದಷ್ಟೆ ಹಸಿರು ಹೊರೆಕಾಣಿಕೆ ಸಮರ್ಪಣೆ ಇಲ್ಲಿನ ವಿಶೇಷವಾಗಿತ್ತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಜಿನರಾಜ ಆರಿಗ ಪಚ್ಚಾಜೆಗುತ್ತು ಮತ್ತು ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಬಿ. ಪದ್ಮಶೇಖರ ಜೈನ್‌ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here