Home ಧಾರ್ಮಿಕ ಸುದ್ದಿ ಶ್ರೀ ಕಾರಿಂಜೇಶ್ವರ ದೇವಸ್ಥಾನ: ಸೌರಮಾನ ಯುಗಾದಿ ಉತ್ಸವ

ಶ್ರೀ ಕಾರಿಂಜೇಶ್ವರ ದೇವಸ್ಥಾನ: ಸೌರಮಾನ ಯುಗಾದಿ ಉತ್ಸವ

1249
0
SHARE

ಪುಂಜಾಲಕಟ್ಟೆ : ಭೂ ಕೈಲಾಸ ಪ್ರತೀತಿಯ ಕಾವಳ ಮೂಡೂರು ಗ್ರಾಮದ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಸೌರಮಾನ ಯುಗಾದಿ ಉತ್ಸವ ರವಿವಾರ ನಡೆಯಿತು.

ಬೆಳಗ್ಗೆ ಶ್ರೀ ಕಾರಿಂಜೇಶ್ವರ ಸನ್ನಿಧಿಯಿಂದ ಶ್ರೀ ಪರಮೇಶ್ವರ ದೇವರು ಇಳಿದು ಶ್ರೀ ಪಾರ್ವತಿ ಸನ್ನಿಧಿಗೆ ಆಗಮಿಸಿ ವಸಂತಕಟ್ಟೆಯಲ್ಲಿ ವಸಂತೋತ್ಸವ ನಡೆಯಿತು. ಶ್ರೀ ಕಾರಿಂಜೇಶ್ವರ ಮತ್ತು ಶ್ರೀ ಪಾರ್ವತಿ ಸನ್ನಿಧಿಯಲ್ಲಿ ಪ್ರಧಾನಅರ್ಚಕ ವೇ|ಮೂ| ನಟರಾಜ ಉಪಾಧ್ಯಾಯ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು. ಬಳಿಕ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ರಥೋತ್ಸವ ನಡೆಯಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಭಕ್ತಾಧಿಗಳಿಗೆ ಫಲಾಹಾರ, ಪಾನೀಯ ವ್ಯವಸ್ಥೆಗೊಳಿಸಲಾಗಿತ್ತು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಜಿನರಾಜ ಆರಿಗ ಪಚ್ಚಾಜೆ ಗುತ್ತು, ಪ್ರಮುಖರಾದ ಗಣಪತಿ ಮುಚ್ಚಿನ್ನಾಯ, ವೆಂಕಟರಮಣ ಮುಚ್ಚಿನ್ನಾಯ, ಗ್ರಾಮಣಿ ವೆಂಕಟರಾಜ ಎಳಚಿತ್ತಾಯ, ಸದಸ್ಯರಾದ ಜನಾರ್ದನ ಆಚಾರ್ಯ ಬಾಳ್ತಬೈಲ್‌, ಸದಾಶಿವ ಪ್ರಭು, ಕೃಷ್ಣಪ್ಪ ಗೌಡ ತಾಳಿತ್ತೂಟ್ಟು, ವಿಶ್ವನಾಥ ಪೂಜಾರಿ ಪೀರ್ಯ, ವೆಂಕಪ್ಪ ನಾಯ್ಕ ಕಾರಿಂಜಬೈಲ್‌, ಸುಜಲಾ ಶೆಟ್ಟಿ, ಸವಿತಾ, ವ್ಯವಸ್ಥಾಪಕ ಸತೀಶ್‌ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here