Home ಧಾರ್ಮಿಕ ಸುದ್ದಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಎ. 6- 15: ಯುಗಾದಿ ಮಹೋತ್ಸವ

ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಎ. 6- 15: ಯುಗಾದಿ ಮಹೋತ್ಸವ

2112
0
SHARE

ಮಹಾನಗರ: ಇಲ್ಲಿನ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾ ಯಕ ದೇವಸ್ಥಾನದಲ್ಲಿ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಯುಗಾದಿ ಮಹೋತ್ಸವ ಎ. 6ರಿಂದ 15ರ ವರೆಗೆ ನಡೆಯಲಿದೆ.

ಎ. 5ರಂದು ಬೆಳಗ್ಗೆ ಧಾರ್ಮಿಕ ವಿಧಿವಿಧಾನ. ಸಂಜೆ ಪಡುಪಣಂಬೂರು ನಾಲ್ಕೂರು ಪಂಜುರ್ಲಿ ದೈವದ ಆಗಮನ. ಎ. 6ರಂದು ಬೆಳಗ್ಗೆ 11.15ಕ್ಕೆ ಧ್ವಜಾರೋಹಣದಿಂದ ಯುಗಾದಿ ಮಹೋತ್ಸವ ಪ್ರಾರಂಭಗೊಂಡು 10 ದಿನಗಳ ಪರ್ಯಂತ ಪ್ರತಿದಿನ ಉತ್ಸವ ನೆರವೇರಲಿದೆ. ಎ. 10ರಂದು ಬೆಳಗ್ಗೆ ಶ್ರೀ ಗುರುಮಠದ ಗುರು ಶ್ರೀ ವೀರಭದ್ರ ದೇವರ ಪಂಚಮಿ ಉತ್ಸವ ನಡೆಯಲಿದ್ದು, ಎ.12ರಂದು ಪರಮಪೂಜ್ಯ ಸ್ವಾಮೀಜಿ ಗಳಿಂದ ಆಶೀರ್ವಚನ, ಸಾಧಕರಿಗೆ ಸಮ್ಮಾನ, ರಾತ್ರಿ ಚಂದ್ರಮಂಡಲೋತ್ಸವ, ಬೀದಿ ಸವಾರಿ ಜರಗಲಿದೆ.

ಎ.13ರಂದು ಉತ್ಸವ ಸಂಜೆ ಶ್ರೀ ಗುರುಮಠದ ಗುರು, ವೀರಭದ್ರ ದೇವರ ಉತ್ಸವ, ಬೀದಿ ಸವಾರಿ, ರಥೋತ್ಸವ, ರಾತ್ರಿ ಉತ್ಸವ, ಶಯನೋತ್ಸವ ನೆರವೇರಲಿದೆ. ಎ. 14ರಂದು ಬೆಳಿಗ್ಗೆ 7. 15ಕ್ಕೆ ಶ್ರೀ ದೇವಿಯ ಕವಾಟ ಉದ್ಘಾಟನೆ. ಬೆಳಿಗ್ಗೆ 10.30 ಕ್ಕೆ ಧಾರ್ಮಿಕ ಸಭೆ, ಸಾಧಕರಿಗೆ ಸಮ್ಮಾನ, ಸ್ವಾಮೀಜಿಯವರಿಂದ ಆಶೀರ್ವಚನ, ಸಂಜೆ ಅವಭೃಥ, ರಾತ್ರಿ ಧ್ವಜಾವರೋಹಣ ನಡೆಯಲಿದೆ. ಎ. 15ರಂದು ಮಧ್ಯಾಹ್ನ ಚೂರ್ಣೋತ್ಸವ, ಎ. 16ರಂದು ಅಮ್ಮನವರ ವಿಶ್ವಕರ್ಮ ದೇವರ ರಂಗ ಪೂಜೆ, ಎ. 17ರಂದು ವಿನಾಯಕ ದೇವರ ರಂಗ ಪೂಜೆ, ಶ್ರೀ ಕ್ಷೇತ್ರದ ಪಂಜುರ್ಲಿ ಮತ್ತು ಗುಳಿಗ ದೈವಗಳ ನೇಮ, ಪಡುಪಣಂಬೂರು ನಾಲ್ಕೂರು ಪಂಜುರ್ಲಿ ದೈವದ ನಿರ್ಗಮನವಾಗಲಿದೆ. ಪ್ರತಿ ದಿನ ಸಂಜೆ ಶ್ರೀ ಕ್ಷೇತ್ರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುವು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರು ಕೆ. ಕೇಶವ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here